ADVERTISEMENT

ಚಿಕ್ಕಹಳ್ಳಿ ಗ್ರಾ.ಪಂ. ಅಧ್ಯಕ್ಷ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 5:02 IST
Last Updated 15 ಮಾರ್ಚ್ 2024, 5:02 IST
ತಿಪ್ಪಸಂದ್ರ ಹೋಬಳಿ ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ.ಎನ್. ಶ್ರೀನಿವಾಸ್ ಮೂರ್ತಿ ಆಯ್ಕೆಯಾದರು
ತಿಪ್ಪಸಂದ್ರ ಹೋಬಳಿ ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ.ಎನ್. ಶ್ರೀನಿವಾಸ್ ಮೂರ್ತಿ ಆಯ್ಕೆಯಾದರು   

ಕುದೂರು: ತಿಪ್ಪಸಂದ್ರ ಹೋಬಳಿ ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಜಿ.ಎನ್. ಶ್ರೀನಿವಾಸ್ ಮೂರ್ತಿ ಆಯ್ಕೆಯಾದರು.

ಗ್ರಾ.ಪಂ. ಅಧ್ಯಕ್ಷ ಜಯಮ್ಮ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಜಿ.ಎನ್. ಶ್ರೀನಿವಾಸ್ ಮೂರ್ತಿ, ಜಿ.ಎನ್.ನಿಂಗೇಗೌಡ ಮತ್ತು ಪುಷ್ಪ ನಾಮಪತ್ರ ಸಲ್ಲಿಸಿದ್ದರು. ಪುಷ್ಪ ಅವರ ನಾಮಪತ್ರ ಅಸಿಂಧುವಾಗಿತ್ತು.

ADVERTISEMENT

ಜಿ.ಎನ್. ಶ್ರೀನಿವಾಸ್ ಮೂರ್ತಿ 10 ಮತ ಪಡೆದು ವಿಜೇತರಾದರು. ಜಿ.ಎನ್. ನಿಂಗೇಗೌಡ 6 ಮತ ಪಡೆಯಲು ಶಕ್ತರಾದರು ಎಂದು ಚುನಾವಣಾಧಿಕಾರಿಯಾಗಿದ್ದ ವಲಯ ಅರಣ್ಯಾಧಿಕಾರಿ ಚೈತ್ರ ಘೋಷಿಸಿದರು.

ನೂತನ ಅಧ್ಯಕ್ಷ  ಶ್ರೀನಿವಾಸ್ ಮೂರ್ತಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪ್ರತಿ ಮನೆಗೂ ತಲುಪಿಸಲಾಗುವುದು. ಜಲಜೀವನ್ ಮಿಷನ್ ಯೋಜನೆಯಡಿ ಮನೆ, ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಂದು ಮನೆಗೂ ಇ-ಸ್ವತ್ತು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಸದಸ್ಯ ಶಿವಪ್ರಸಾದ್, ಉಪಾಧ್ಯಕ್ಷೆ ಶಾರದಮ್ಮ, ಮಾಜಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಸದಸ್ಯರಾದ ನೂರ್ ಜಾನ್, ಯಾಸ್ಮಿನ್ ಭಾನು, ಜಾಕಿರ್ ಹುಸೇನ್, ಜಿ.ಎಂ. ವೆಂಕಟೇಶ್, ಸಿ.ಎಂ. ನಾರಾಯಣ ಸ್ವಾಮಿ, ಆರ್. ಪುಷ್ವ, ಜಯಮ್ಮ, ವಿ.ಮುನಿರಾಜು, ಟಿ.ಜಿ. ಭವ್ಯ, ನರಸಿಂಹಮೂರ್ತಿ, ಎಚ್.ಆರ್. ಶಿವಕುಮಾರ್, ಜಯಮ್ಮ, ಹುಳ್ಳೆನಹಳ್ಳಿ ಗ್ರಾ.ಪಂ. ಅಧ್ಯಕ್ಷ ದಕ್ಷಿಣ ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.