ADVERTISEMENT

ಬೆಂಗಳೂರು ದಕ್ಷಿಣ ಜಿಲ್ಲೆ: 8 ವರ್ಷದಲ್ಲಿ 80 ಬಾಲ್ಯ ವಿವಾಹ

ಓದೇಶ ಸಕಲೇಶಪುರ
Published 10 ನವೆಂಬರ್ 2025, 2:09 IST
Last Updated 10 ನವೆಂಬರ್ 2025, 2:09 IST
<div class="paragraphs"><p>ಬಾಲ್ಯ ವಿವಾಹ</p></div>

ಬಾಲ್ಯ ವಿವಾಹ

   

ರಾಮನಗರ: ಕಳೆದ 8 ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸುಮಾರು 80 ಬಾಲ್ಯವಿವಾಹಗಳು ವರದಿಯಾಗಿವೆ. ಸಂಸಾರ ಮತ್ತು ಕುಟುಂಬದ ಕಲ್ಪನೆಯೇ ಗೊತ್ತಿಲ್ಲದ ಬಾಲಕ–ಬಾಲಕಿಯರನ್ನು ಈ ಆಧುನಿಕ ಕಾಲದಲ್ಲೂ ವಿವಾಹ ಬಂಧನಕ್ಕೆ ಒಳಪಡಿಸುವ ಪಿಡುಗು, ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಈ ಪಿಡುಗಿಗೆ ಬೀಳುವವರಲ್ಲಿ ಬಾಲಕಿಯರೇ ಹೆಚ್ಚು.

ಶಾಲಾ ಶಿಕ್ಷಣ ಪಡೆದು ಭವಿಷ್ಯದ ಬಗ್ಗೆ ಆಗಷ್ಟೇ ಕನಸು ಕಾಣಲಾರಂಭಿಸುವ ಹದಿ ಹರೆಯದ ಹೆಣ್ಣು ಮಕ್ಕನ್ನು 18 ವರ್ಷಕ್ಕೆ ಮುಂಚೆಯೇ ಹಸೆಮಣೆಗೆ ಏರಿಸುವುದರ ವಿರುದ್ಧ ಕಠಿಣ ಕಾನೂಗಳಿದ್ದರೂ, ಈ ಪಿಡುಗಿಗೆ ಸಂಪೂರ್ಣವಾಗಿ ಅಂಕುಶ ಬಿದ್ದಿಲ್ಲ. ವಿವಿಧ ಕಾರಣಗಳಿಗಾಗಿ ಬಾಲ್ಯವಿವಾಹ ಪ್ರಕರಣಗಳು ವರದಿಯಾಗುತ್ತಲೇ ಇವೆ.

ADVERTISEMENT

31 ವಿವಾಹಕ್ಕೆ ತಡೆ: ಕಾನೂನಿಗೆ ವಿರುದ್ಧವಾದ ಬಾಲ್ಯ ವಿವಾಹ ಎಲ್ಲಾದರೂ ನಡೆಯುತ್ತಿರುವುದು ಕಂಡುಬಂದರೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ದಾಳಿ ನಡೆಸಿ ವಿವಾಹಗಳನ್ನು ತಡೆಯುತ್ತದೆ. ಅದರಂತೆ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 31 ಬಾಲ್ಯ ವಿವಾಹಗಳಿಗೆ ತಡೆಯೊಡ್ಡಲಾಗಿದೆ.

‘ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸರನ್ನೊಳಗೊಂಡ ತಂಡವು ಬಾಲ್ಯವಿವಾಹ ಕುರಿತು ಬರುವ ದೂರುಗಳ ವಿರುದ್ಧ ತಕ್ಷಣ ಕಾರ್ಯಪ್ರವೃತ್ತವಾಗಿ ಕಾರ್ಯಾಚರಣೆ ನಡೆಸುತ್ತದೆ. ಅದಾಗಲೇ ವಿವಾಹವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಪ್ರಕರಣ ಬಾಲ್ಯವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಜನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮೂಹಿಕ ವಿವಾಹದ ಮೇಲೂ ನಿಗಾ: ‘ಸಾಮೂಹಿಕವಾಗಿ ನಡೆಯುವ ವಿವಾಹದಲ್ಲೂ ಬಾಲ್ಯವಿವಾಹ ನಡೆಯುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಯಾರೇ ಅಂತಹ ವಿವಾಹಗಳನ್ನು ನಡೆಸುವಾಗ ಕಡ್ಡಾಯವಾಗಿ ಅವರ ಜನ್ಮದಿನಾಂಕ ತಿಳಿಸುವ ಯಾವುದಾದರೂ ದಾಖಲೆಯನ್ನು ಸಂಗ್ರಹಿಸಿರಬೇಕು. ಇದನ್ನೂ ಮೀರಿಯೂ ಬಾಲ್ಯವಿವಾಹ ನಡೆಯುತ್ತಿರುವುದು ಖಚಿತವಾದರೆ ತಡೆಯಲಾಗುತ್ತದೆ’ ಎಂದು ಹೇಳಿದರು.

‘ಕೆಲವರು ಗರ್ಭಿಣಿಯರಾದ ಬಳಿಕವೇ ಅವರು ಬಾಲ್ಯವಿವಾಹ ಆಗಿರುವುದು ಗೊತ್ತಾಗುತ್ತದೆ. ಆಸ್ಪತ್ರೆಗೆ ಬಂದಾಗ ಬೆಳಕಿಗೆ ಬರುವ ಇಂತಹ ಘಟನೆ ಕುರಿತು ಅಲ್ಲಿನ ಸಿಬ್ಬಂದಿ ನೀಡುವ ಮಾಹಿತಿ ಮೇರೆಗೆ, ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಘಟಕವು ಬಾಲ್ಯ ವಿವಾಹ ತಡೆ ಜೊತೆಗೆ ಈ ಪಿಡುಗು ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡುತ್ತಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.