
ಚಿಂತಾಮಣಿ: ನಗರದ ಹೊರ ವಲಯದಲ್ಲಿರುವ ಹಜರತ್ ಸೈಯದ್ ಬಾಬಾ ಬುಡನ್ ಷಾ ವಲಿ ದರ್ಗಾದ 110ನೇ ಗಂಧೋತ್ಸವನ್ನು ಮಂಗಳವಾರ ರಾತ್ರಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ವೆಂಕಟಗಿರಿ ಕೋಟೆಯಲ್ಲಿರುವ ಅಬ್ದುಲ್ ರಶೀದ್ ಕುಟುಂಬಸ್ಥರ ಮನೆಯಿಂದ ಹಜರತ್ ಸೈಯದ್ ಬಾಬಾ ಬುಡನ್ ಷಾ ವಲಿ ಗಂಧೋತ್ಸವು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಯಿತು.
ದರ್ಗಾದ ಮುಜಾವರ್‌ಗಳು ಮತ್ತು ಫಕೀರರು ಗಂಧೋತ್ಸವ ತೆಗೆದುಕೊಂಡು ವೆಂಕಟಗಿರಿ ಕೋಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದರ್ಗಾ ತಲುಪಿದರು. ಅಲ್ಲಿ ಗಂಧವನ್ನು ಸಮರ್ಪಿಸಿ ದೇಶದ ಜನರ ಒಳಿತಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಗಂಧವನ್ನು ತೆಗೆದುಕೊಂಡು ಹೋಗುವ ಸೊಂದಲ್ ಮೆರವಣಿಗೆಯು ಪ್ರಮುಖ ಆಕರ್ಷಣೆಯಾಗಿತ್ತು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು. ಉರುಸ್ ಅಂಗವಾಗಿ ದರ್ಗಾವನ್ನು ಅಲಂಕರಿಸಲಾಗಿತ್ತು.
ಅಬ್ದುಲ್ ಹಫೀಜ್ ಮಾತನಾಡಿ, 50 ವರ್ಷಗಳಿಂದ ಗಂಧೋತ್ಸವ ನಡೆಸುತ್ತಿದ್ದೇವೆ. ನಮ್ಮ ತಾತ, ತಂದೆ ಕಾಲದಿಂದ ಗಂಧೋತ್ಸವ ನಡೆಸುತ್ತಿದ್ದೇವೆ. ಹಿಂದೂ–ಮುಸ್ಲಿಂ ಒಟ್ಟಾಗಿ ಗಂಧೋತ್ಸವ ಆಚರಿಸುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.