ADVERTISEMENT

ಕನಕಪುರದಲ್ಲಿ ಕ್ರಿಸ್‌ಮಸ್‌ ಸಂಭ್ರಮ: ಬಗೆ, ಬಗೆಯ ಖಾದ್ಯ, ರುಚಿಕರ ಕೇಕ್‌ ಸಿದ್ಧ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:35 IST
Last Updated 24 ಡಿಸೆಂಬರ್ 2025, 6:35 IST
ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿರುವ ಕನಕಪುರದ ಎಲ್ಐಸಿ ಪಕ್ಕದ ಸಂತ ರೀತಮ್ಮ ಚರ್ಚ್‌ 
ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿರುವ ಕನಕಪುರದ ಎಲ್ಐಸಿ ಪಕ್ಕದ ಸಂತ ರೀತಮ್ಮ ಚರ್ಚ್‌    

ಕನಕಪುರ: ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್‌ಮಸ್‌ ಆಚರಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ನಗರದ ಎಲ್ಐಸಿ ಕಚೇರಿ ಪಕ್ಕದ ಚರ್ಚ್ ಅನ್ನು ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕ್ರೈಸ್ತ ಸಮುದಾಯದವರ  ಮನೆಗಳನ್ನು ಆಕಾಶಬುಟ್ಟಿ, ನಕ್ಷತ್ರ ಹಾಗೂ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. 

ಡಿ.24ರ ಸಂಜೆಯಿಂದಲೇ ಕ್ರಿಸ್‌ಮಸ್‌ ಆಚರಣೆ ಆರಂಭವಾಗುತ್ತದೆ. ಸಮೂಹಗಾನ, ಪ್ರಾರ್ಥನೆ, ಸಿಹಿ ತಿನಿಸು, ಮಕ್ಕಳ ನೃತ್ಯ, ಹಾಡು ಮೆರುಗು ನೀಡುತ್ತವೆ. 25ರಂದು ಬೆಳಗ್ಗೆ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಕ್ರಿಸ್ತನ ಸಂದೇಶ ವಾಚನ, ಸಮೂಹಗಾನ ನಡೆಯುತ್ತವೆ.

ADVERTISEMENT

ಕ್ರೈಸ್ತ ಸಮುದಾಯದ ಕುಟುಂಬ ಸದಸ್ಯರು ಹೊಸ ಬಟ್ಟೆ, ಉಡುಗೊರೆ ಖರೀದಿ ಮುಗಿಸಿದ್ದು ಬಗೆ, ಬಗೆಯ ಖಾದ್ಯಗಳ ಜೊತೆ ಕೇಕ್‌ ತಯಾರಿಸಿದ್ದಾರೆ.

ಹಾರೋಬೆಲೆಯ ದೊಡ್ಡ ಚರ್ಚ್‌ನಲ್ಲಿ ವಿಜೃಂಭಣೆಯಿಂದ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ. ಕನಕಪುರದ ವಾಣಿ ಟಾಕೀಸ್ ಪಕ್ಕದ ಚರ್ಚ್‌ ಹಬ್ಬಕ್ಕಾಗಿ ಸಜ್ಜಾಗಿದೆ.

ಸಿದ್ಧವಾಗುತ್ತಿರುವ ಗೋದಲಿ 
ವಿದ್ಯುತ್ ದೀಪದ ಅಲಂಕಾರದಿಂದ ನಳ ನಳಿಸುತ್ತಿರುವ ಚರ್ಚ್
ಹೌಸಿಂಗ್ ಬೋರ್ಡ್ ನಲ್ಲಿ ಕ್ರೈಸ್ತ ಸಮುದಾಯದ ಮನೆಯೊಂದರಲ್ಲಿ ಕ್ರಿಸ್ಮಸ್ ಆಚರಣೆಗಾಗಿ ವಿದ್ಯುತ್ ದೀಪದ ಅಲಂಕಾರ ಮಾಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.