ADVERTISEMENT

700 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

kengeri

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:03 IST
Last Updated 13 ಜೂನ್ 2019, 20:03 IST
ಎಸ್.ಹೇಮಂತ್ ಕುಮಾರ್ ಅವರನ್ನು ಡಾ.ಪಿ.ಜಿ.ದಿವಾಕರ್ ಗೌರವಿಸಿದರು. ಪ್ರಾಂಶುಪಾಲ ಡಾ.ಎಂ.ಮುರಳೀಧರ್ ರಾವ್ ಇದ್ದಾರೆ
ಎಸ್.ಹೇಮಂತ್ ಕುಮಾರ್ ಅವರನ್ನು ಡಾ.ಪಿ.ಜಿ.ದಿವಾಕರ್ ಗೌರವಿಸಿದರು. ಪ್ರಾಂಶುಪಾಲ ಡಾ.ಎಂ.ಮುರಳೀಧರ್ ರಾವ್ ಇದ್ದಾರೆ   

ಬೆಂಗಳೂರು: ಡಾನ್ ಬಾಸ್ಕೊ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ 700 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಸ್ರೊ ಹಿರಿಯ ವಿಜ್ಞಾನಿ ಡಾ.ಪಿ.ಜಿ.ದಿವಾಕರ್, ‘ಸಂಶೋಧನೆಯಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಇಸ್ರೊ ಅಗತ್ಯ ಸಲಹೆ ಹಾಗೂ ಪ್ರೋತ್ಸಾಹ ನೀಡಲಿದೆ. ವಿದ್ಯಾರ್ಥಿಗಳು ತಾಂತ್ರಿಕ ನೆರವು ಪಡೆದು ವಿಶ್ವದ ದೃಷ್ಟಿ ಭಾರತದತ್ತ ತಿರುಗುವಂತಹ ಸಾಧನೆ ಮಾಡಬೇಕು’ ಎಂದು ಹೇಳಿದರು.

ಇದೇ ವೇಳೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಎಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್) ವಿಭಾಗದಲ್ಲಿ 5ನೇ ರ‍್ಯಾಂಕ್ ಪಡೆದ ಎಸ್.ಹೇಮಂತ್ ಕುಮಾರ್ ಅವರನ್ನು ಗೌರವಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.