ADVERTISEMENT

ಕಮಲ್ ಹಾಸನ್ ವಿರುದ್ಧದ ದೂರು ವಾಪಸ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 21:12 IST
Last Updated 7 ಆಗಸ್ಟ್ 2025, 21:12 IST
<div class="paragraphs"><p> ಕಮಲ್ ಹಾಸನ್</p></div>

ಕಮಲ್ ಹಾಸನ್

   

ಕನಕಪುರ: ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ ಎಂದು ಹೇಳಿದ್ದ ಬಹುಭಾಷಾ ನಟ ಪಾರ್ಥಸಾರಥಿ ಶ್ರೀನಿವಾಸನ್ ಅಲಿಯಾಸ್ ಕಮಲ್ ಹಾಸನ್ ವಿರುದ್ಧ ಕನಕಪುರ ಜೆಎಂಎಫ್‌ ನ್ಯಾಯಾಲಯದಲ್ಲಿ ಜೂನ್ 30 ರಂದು ದಾಖಲಿಸಲಾಗಿದ್ದ ಖಾಸಗಿ ಕ್ರಿಮಿನಲ್‌ ದೂರನ್ನು(ಪಿಸಿಆರ್) ಹಿಂಪಡೆದಿರುವುದಾಗಿ ದೂರುದಾರ ಗುರುವಾರ ಹೇಳಿದ್ದಾರೆ.

‘ಕಮಲ್ ಹಾಸನ್ ಜುಲೈ 25 ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಅವರ ವಿರುದ್ಧದ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಕನಕಪುರ ಜೆಎಂಎಫ್‌ಸಿಯಲ್ಲಿ ದಾಖಲಾಗಿದ್ದ ದೂರನ್ನು ಹಿಂಪಡೆದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲಿಸುವೆ’ ಎಂದು ದೂರುದಾರ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್ ತಿಳಿಸಿದ್ದಾರೆ.

ADVERTISEMENT

ಭಾಷಾ ವಿವಾದ ಸೃಷ್ಟಿಸಿದ ಕಮಲ್‌ ಹಾಸನ್‌ ಹೇಳಿಕೆ ನೀಡಿದ ಆ ಸಮಾರಂಭದಲ್ಲಿ ಭಾಗವಹಿಸಿದ್ದ ನಟ ಡಾ.ಶಿವರಾಜ್‌ಕುಮಾರ್ ಅವರನ್ನು ಪ್ರತ್ಯಕ್ಷ ಸಾಕ್ಷಿಯಾಗಿ ಪರಿಗಣಿಸುವಂತೆ ದೂರುದಾರರು ಮನವಿ ಮಾಡಿದ್ದರು.

‘ಕನ್ನಡ ಭಾಷೆಯ ಉಗಮದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ವೈಯಕ್ತಿಕವಾಗಿ ನೋವು ಮತ್ತು ಮಾನಸಿಕ ಖಿನ್ನತೆ ತಂದಿದೆ. ಕನ್ನಡಕ್ಕೆ ಅಪಮಾನ ಮಾಡಿದ ಅವರು ಕ್ಷಮೆ ಕೇಳದೆ ಉದ್ಧಟತನ ತೋರಿದ್ದಾರೆ’ ಎಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 223ರ ಅಡಿ ಪಿಸಿಆರ್ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.