ADVERTISEMENT

ದೇಶದ ಮೊದಲ ಶಿಕ್ಷಕಿಗೆ ‘ಭಾರತ ರತ್ನ’ ನೀಡಿ

ಸಾವಿತ್ರಿಬಾಯಿ ಫುಲೆ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 23:29 IST
Last Updated 3 ಜನವರಿ 2023, 23:29 IST
ಕನಕಪುರ ಧಮ್ಮ ದೀವಿಗೆ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನಡೆಸಿದ ಸಭೆಯಲ್ಲಿ ಮಲ್ಲಿಕಾರ್ಜುನ್‌ ಮಾತನಾಡಿದರು
ಕನಕಪುರ ಧಮ್ಮ ದೀವಿಗೆ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನಡೆಸಿದ ಸಭೆಯಲ್ಲಿ ಮಲ್ಲಿಕಾರ್ಜುನ್‌ ಮಾತನಾಡಿದರು   

ಕನಕಪುರ: ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಇದೇ 5ರ ಗುರುವಾರ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.

ಧಮ್ಮದೀವಿಗೆ ಚಾರಿಟಲ್ ಟ್ರಸ್ಟ್‌ನ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ‘ದೇಶದಲ್ಲಿ ಮಹಿಳೆಯರಿಗೆ ಶಿಕ್ಷಣದ ಅವಕಾಶವೇ ಇಲ್ಲದ ಸಂದರ್ಭದಲ್ಲಿ ಅಕ್ಷರ ಕಲಿಸಿದ ಸಾವಿತ್ರಿಬಾಯಿ ಫುಲೆ ಅವರಿಗೆ ಭಾರತ ರತ್ನ ನೀಡಬೇಕು’ ಎಂದು ಒತ್ತಾಯಿಸಿದರು.

ಫುಲೆ ದಂಪತಿ ತಳ ಸಮುದಾಯಗಳಿಗೆ ಅಕ್ಷರದ ಬೆಳಕು ತೋರಿಸಿದ್ದರು. ಆದರೆ, ಅವರ ವಿಚಾರಧಾರೆಗಳು ಇಂದಿಗೂ ಮುನ್ನೆಲೆಗೆ ಬಾರದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಾವಿತ್ರಿಬಾಯಿ ಫುಲೆ ಅವರು ಸಾಮಾಜಿಕ ಅಂತರಂಗಕ್ಕೆ ಕವಿದಿದ್ದ ಕತ್ತಲೆ ಸರಿಸಿ ಬೆಳಕು ಹುಟ್ಟುಹಾಕಿದ್ದರು. ಶಾಲೆ ತೆರೆಯುವ ಮೂಲಕ ಶಿಕ್ಷಣವನ್ನು ರಾಷ್ಟ್ರೀಯ ಚಳವಳಿಯನ್ನಾಗಿಸಿದ್ದರು ಎಂದರು.

ಬಂತೆವರಜ್ಯೋತಿ ಅವರ ದಿವ್ಯ ಸಾನಿಧ್ಯದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್, ಶಾಸಕ ಎನ್. ಮಹೇಶ್, ಕೆ.ಎಸ್. ಭಗವಾನ್, ಪ್ರಗತಿಪರ ಚಿಂತಕ ಸಿಂಥಿಯಾ ಸ್ಟೀಫನ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಧಮ್ಮದೀವಿಗೆ ಚಾರಿಟಬಲ್‌ ಟ್ರಸ್ಟ್‌ನ ಪಾಧಿಕಾರಿಗಳಾದ ನಿಂಗರಾಜು, ಶಿವಮಾಧು, ಮುನಿಮಲ್ಲಣ್ಣ, ಬಸವರಾಜು, ಶ್ರೀನಿವಾಸ್, ಬಸವರಾಜು, ಮುನಿರಾಜು, ರವಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.