ADVERTISEMENT

ಸಿಪಿವೈ ವಿರುದ್ಧ ಸ್ವಪಕ್ಷೀಯರ ಅಸಮಾಧಾನ: ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:31 IST
Last Updated 20 ಫೆಬ್ರುವರಿ 2026, 4:31 IST
<div class="paragraphs"><p> ಶಾಸಕ ಸಿ.ಪಿ. ಯೋಗೇಶ್ವರ್</p></div>

ಶಾಸಕ ಸಿ.ಪಿ. ಯೋಗೇಶ್ವರ್

   

ಚನ್ನಪಟ್ಟಣ: ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದಲ್ಲಿಮಂಗಳವಾರ (ಫೆ.17) ರಾತ್ರಿ ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಆಯೋಜಿಸಿದ್ದ ಕುರುಕ್ಷೇತ್ರ ನಾಟಕದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಯೋಗೇಶ್ವರ್ ನಡೆಯಿಂದ ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನಗೊಂಡರು.

ADVERTISEMENT

‘ನಮಗೆ ಮಾಹಿತಿ ನೀಡದೆ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಏಕೆ ಪಾಲ್ಗೊಂಡಿದ್ದೀರಿ’ ಎಂದು ಪ್ರಶ್ನಿಸಿ, ಆಕ್ರೋಶ ಹೊರ ಹಾಕಿದರು.

ಜೆಡಿಎಸ್‌ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಂದ ಯೋಗೇಶ್ವರ್‌ಗೆ ಹೂವಿನ ಹಾರ ಹಾಕಲು ಬಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಯೋಗೇಶ್ವರ್ ಗರಂ ಆದರು.

ರಸ್ತೆಯಲ್ಲಿ ಯಾಕೆ ಹೂವಿನ ಹಾರ ಎಂದು ಯೋಗೇಶ್ವರ್‌ ಪ್ರಶ್ನಿಸಿದರು. ಆಗ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ‘ಚುನಾವಣೆಯಲ್ಲಿ ರೋಡ್‌ನಲ್ಲಿಯೇ ಹಾರ ಹಾಕಿಸಿಕೊಳ್ತೀರಿ’ ಎಂದು ಪ್ರಶ್ನಿಸಿದರು. ನಂತರ ಯೋಗೇಶ್ವರ್ ಕಾರು ಹತ್ತಿ ಸ್ಥಳದಿಂದ ಹೊರಟು ಹೋದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.