
ಪ್ರಜಾವಾಣಿ ವಾರ್ತೆ
ಸೈಬರ್ ಅಪರಾಧ
ಕನಕಪುರ: ಸೈಬರ್ ವಂಚಕರು ಮೊಬೈಲ್ ನಂಬರ್ ಹ್ಯಾಕ್ ಮಾಡಿ ವ್ಯಕ್ತಿಯೊಬ್ಬರ ಖಾತೆಯಿಂದ ₹1.50 ಲಕ್ಷ ವರ್ಗಾವಣೆ ಮಾಡಿಕೊಂಡಿರುವ ಘಟನೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾತನೂರು ಹೋಬಳಿ ಕಂಚನಹಳ್ಳಿ ಗ್ರಾಮದ ಗಂಗಾಧರ್ ಹಣ ಕಳೆದುಕೊಂಡ ವ್ಯಕ್ತಿ. ಡಿ.23 ರಂದು ಗಂಗಾಧರ್ ಅವರ ವಾಟ್ಸ್ ಆ್ಯಪ್‌ಗೆ ವಂಚಕರು ಆರ್‌ಟಿಒ ಇ–ಚಲನ್ ಅ್ಯಪ್ ಎಂಬ ನಕಲಿ ಲಿಂಕ್ ಕಳಿಹಿಸಿದ್ದಾರೆ.
ಗಂಗಾಧರ್ ಅದನ್ನು ಕ್ಲಿಕ್ ಮಾಡಿದ ತಕ್ಷಣ ಅವರ ಮೊಬೈಲ್ ಸಂಖ್ಯೆ ಹ್ಯಾಕ್ ಆಗಿ ಅವರ ಮೊಬೈಲ್‌ಗೆ ಬರುವ ಎಲ್ಲ ಕರೆ, ಸಂದೇಶಗಳು ಸೈಬರ್ ವಂಚಕರ ನಂಬರಿಗೆ ಫಾರ್ವರ್ಡ್ ಆಗಿವೆ.
ನಂತರ ಅವರ ಖಾತೆಯಿಂದ ಹಂತ, ಹಂತವಾಗಿ ₹1.50 ಲಕ್ಷವನ್ನು ವಂಚಕರು ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಸಂಬಂಧ ರಾಮನಗರ ಸೈಬರ್ ಕ್ರೈಂಗೆ ದೂರು ನೀಡಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.