ಹಾರೋಹಳ್ಳಿ: ರೇಣುಕಾ ಯಲ್ಲಮ್ಮ ದೇವಿ ದೇಗುಲದಲ್ಲಿ ದಸರಾ ಆಚರಣೆ ಕಳೆಗಟ್ಟಿದ್ದು, 7 ದಿನದಿಂದಲೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತಿವೆ. 8ನೇ ದಿನದ ಸರಸ್ವತಿ ಅಲಂಕಾರದಲ್ಲಿ ಯಲ್ಲಮ್ಮ ದೇವಿ ಕಂಗೊಳಿಸುತ್ತಿದ್ದು ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂತು.
ಹಾರೋಹಳ್ಳಿಯ ಈಡಿಗರ ಬೀದಿಯಲ್ಲಿರುವ ದೇವಿಗೆ ಪ್ರತಿದಿನವೂ ಒಂದೊಂದು ರೀತಿಯ ಅಲಂಕಾರ ಮಾಡಲಾಗುತ್ತಿದೆ. ಮೊದಲನೇ ದಿನ ಬಾಲತ್ರಿಪುರ ಸುಂದರಿ ಅಲಂಕಾರ, ಎರಡನೇ ದಿನ ಬ್ರಹ್ಮಚಾರಿಣಿ,ಮೂರನೇ ದಿನ ಅನ್ನಪೂರ್ಣೇಶ್ವರಿ, ನಾಲ್ಕನೆ ದಿನ ಸ್ಕಂದ ಮಾತಾ, ಐದನೇ ದಿನ ಮಹಾಲಕ್ಷ್ಮಿ, ಆರನೇ ದಿನ ವರಾಹಿ ಅಲಂಕಾರ ಮಾಡಲಾಗಿತ್ತು.
ವಿಜಯದಶಮಿ ದಿನ ಚಂಡಿಕಾ ಹೋಮ ಹಮ್ಮಿಕೊಳ್ಳಲಾಗಿದೆ. ಗಣಹೋಮ, ಚಂಡಿಕಾ ಹೋಮ, ಪೂರ್ಣಾಹುತಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.