ADVERTISEMENT

ಚನ್ನಪಟ್ಟಣ: ಆಹಾರ ನೀಡದೆ ಕೋಳಿಗಳ ಸಾವು

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 3:07 IST
Last Updated 17 ಜುಲೈ 2023, 3:07 IST
   

ಚನ್ನಪಟ್ಟಣ: ಖಾಸಗಿ ಕೋಳಿ ಸಾಕಾಣಿಕೆ ಕಂಪನಿಯು ಕಳೆದ ಐದು ದಿನಗಳಿಂದ ಕೋಳಿಗಳಿಗೆ ಆಹಾರ ನೀಡದ ಕಾರಣ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಇರುವ ಕೋಳಿ ಫಾರಂಗಳಲ್ಲಿ ಕೋಳಿಗಳು ಸಾಯುತ್ತಿವೆ. ಈ ಬಗ್ಗೆ ನ್ಯಾಯ ನೀಡಬೇಕೆಂದು ಜಿಲ್ಲೆಯ ಕೋಳಿ ಸಾಕಾಣಿಕೆದಾರರು ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ ಹಲವು ರೈತರು ಕಂಪನಿಯೊಂದರ ಜತೆ ಕೋಳಿ ಸಾಕಾಣಿಕೆಗೆ ಒಪ್ಪಂದ ಮಾಡಿಕೊಂಡು ಸಾಕಾಣಿಕೆ ಮಾಡುತ್ತಾ ಬಂದಿದ್ದೇವೆ. ಈ ಕಂಪನಿ ಶಾಖೆಯು ಚನ್ನಪಟ್ಟಣದಲ್ಲಿದ್ದು, ಇದು ಕೋಳಿಗಳಿಗೆ ಒದಗಿಸುವ

ಆಹಾರ ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ಕೋಳಿ ತೂಕದಲ್ಲಿ ಇಳಿಕೆ ಕಂಡು
ರೈತರಿಗೆ ನಷ್ಟ ಎದುರಾಗಿದೆ. ಇದಲ್ಲದೆ ಕಳೆದ ಐದು ದಿನಗಳಿಂದ ಕಂಪನಿ ಶಾಖೆಯು ಕೋಳಿ ಆಹಾರ ನೀಡುವುದನ್ನು ನಿಲ್ಲಿಸಿದೆ. ಇದರಿಂದ ನೂರಾರು ಕೋಳಿಗಳು ಸಾಯುತ್ತಿವೆ. ಕೋಳಿ ಸಾಕಾಣಿಕಾ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಕೋಳಿ ಸಾಕಾಣಿಕೆ ಮಾಡಲು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ರೈತರಿಗೆ ಈಗ ಕಂಪನಿ ಸರಿಯಾಗಿ ಸ್ಪಂದಿಸದೆ ತೊಂದರೆ ಕೊಡುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಕಂಪನಿ ಅಧಿಕಾರಿಗಳು ನಷ್ಟದ ಕಾರಣ ನೀಡುತ್ತಾರೆ. ಜತೆಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು
ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.