ADVERTISEMENT

ಮೇಕೆದಾಟು ಪಾದಯಾತ್ರೆಗೆ ಬೆಂಬಲ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 5:15 IST
Last Updated 19 ಸೆಪ್ಟೆಂಬರ್ 2021, 5:15 IST

ರಾಮನಗರ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಇದೇ 23ರಿಂದ 28ರವರೆಗೆ ಮೇಕೆದಾಟಿನಿಂದ ವಿಧಾನಸೌಧವರೆಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು, ಇದರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವೂ ಪಾಲ್ಗೊಳ್ಳಲಿದೆ ಎಂದು ಸಂಘಟನೆ ರಾಜ್ಯ ಅಧ್ಯಕ್ಷ ಪಿ. ಕೃಷ್ಣೇಗೌಡ ತಿಳಿಸಿದರು.

ರಾಜ್ಯ ಮೇಕೆದಾಟು ಹೋರಾಟ ಸಮಿತಿ ನೇತೃತ್ವದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಪಾದಯಾತ್ರೆಯಲ್ಲಿ ವಿವಿಧ ಜಿಲ್ಲೆಗಳ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಲಿದ್ದು, ತಾತ್ವಿಕ ಅಂತ್ಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈವರೆಗೆ ಬಂದು ಹೋಗಿರುವ ಸರ್ಕಾರಗಳು ಮೇಕೆದಾಟು ವಿಚಾರದಲ್ಲಿ ಬರೀ ‍ಪೊಳ್ಳು ಭರವಸೆಗಳನ್ನೇ ನೀಡಿವೆ. ರಾಜ್ಯದಲ್ಲೊಂದು ಸರ್ಕಾರ, ಕೇಂದ್ರದಲ್ಲೊಂದು ಪಕ್ಷದ ಸರ್ಕಾರ ಇದ್ದಾಗಲಂತೂ ಕನ್ನಡಿಗರ ನೋವನ್ನು ಕೇಳಿದವರಿಲ್ಲ. ಕೇಂದ್ರದಲ್ಲಿ ಆಡಳಿತ ನಡೆಸಿದ ಹೆಚ್ಚಿನ ಸರ್ಕಾರಗಳು ತಮಿಳುನಾಡನ್ನೇ ಓಲೈಸಿಕೊಂಡು ಬಂದಿವೆ ಎಂದು
ದೂರಿದರು.

ADVERTISEMENT

ಸಂಘಟನೆಯ ಗೌರವ ಅಧ್ಯಕ್ಷ ಉಮರ್ ಹಾಜಿ, ಜಿಲ್ಲಾ ಅಧ್ಯಕ್ಷ ಶಿವುಗೌಡ, ಮುಖಂಡರಾದ ಆರ್. ಪ್ರಭು, ಬಿ. ಶಂಕರದಾಸ್, ಮಹಮದ್ ಕುಕ್ಕವಾಡಿ, ರಾಮಚಂದ್ರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.