ADVERTISEMENT

ಹಾರೋಹಳ್ಳಿ | ಮಾನಹಾನಿ ಪ್ರಕರಣ: ₹ 3.20 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:33 IST
Last Updated 27 ಜುಲೈ 2025, 2:33 IST
<div class="paragraphs"><p>ತೀರ್ಪು</p></div>

ತೀರ್ಪು

   

ಹಾರೋಹಳ್ಳಿ: ಹಾರೋಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 2017ರಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದ್ದಂತೆ ₹3.20ಲಕ್ಷ ಮಾನಹಾನಿ ಪರಿಹಾರವಾಗಿ ನೀಡುವಂತೆ ಕನಕಪುರದ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.

ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಶಿವಶಂಕರ್ ಮತ್ತು ಮಹದೇವಯ್ಯ ಎಂಬುವವರು ಮೇಲೆ ಅದೇ ಗ್ರಾಮದ ವ್ಯಕ್ತಿಯೊಬ್ಬರು ಚಾಕು ತೋರಿಸಿ ಹಣ ಕಿತ್ತುಕೊಂಡು ಹೋಗಿರುವುದಾಗಿ ದೂರು ನೀಡಿದ್ದರು. ಶಿವಶಂಕರ್ ಹಾಗೂ ಮಹದೇವಯ್ಯ ನ್ಯಾಯಾಯಲದ ಮೊರೆ ಹೋಗಿದ್ದರು.  

ADVERTISEMENT

ಯಾವುದೇ ತಪ್ಪು ಮಾಡದಿದ್ದರೂ ಇಲ್ಲಸಲ್ಲದ ಅಪಪ್ರಚಾರ ಮಾಡಲಾಯಿತು. ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ನ್ಯಾಯಾಲಯವು ವ್ಯಕ್ತಿ ಘನತೆಯನ್ನು ಎತ್ತಿ ಹಿಡಿದಿದೆ ಎಂದು ಶಿವಶಂಕರ್ ಹಾಗೂ ಮಹದೇವಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ತಟ್ಟೆಕೆರೆ ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.