ADVERTISEMENT

ಚರ್ಮರೋಗ ಉಚಿತ ತಪಾಸಣೆ ಶಿಬಿರ: 300 ಮಂದಿಗೆ ಪ್ರಯೋಜನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 13:50 IST
Last Updated 21 ಏಪ್ರಿಲ್ 2019, 13:50 IST
ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಚರ್ಮರೋಗ ತಪಾಸಣೆ ಶಿಬಿರ ನಡೆಯಿತು
ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಚರ್ಮರೋಗ ತಪಾಸಣೆ ಶಿಬಿರ ನಡೆಯಿತು   

ಕನಕಪುರ: ತಾಲ್ಲೂಕಿನ ಹಾರೋಹಳ್ಳಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಾರೋಹಳ್ಳಿ ರೋಟರಿ ಮತ್ತು ಬೆಂಗಳೂರು ಚರ್ಮ ವೈದ್ಯರ ಸಂಘದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.

300 ಕ್ಕೂ ಹೆಚ್ಚು ಚರ್ಮ ರೋಗಿಗಳು ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡು ಔಷಧಿ ಪಡೆದರು.

ರೋಟರಿ ಅಧ್ಯಕ್ಷ ಏಡಮಡು ಕಾಂತರಾಜು, ಮಹಮ್ಮದ್‌ ಏಜಾಸ್‌, ಡಾ.ಪ್ರಾಣೇಶ್‌, ಸದಸ್ಯರಾದ ತಿಮ್ಮೇಗೌಡ, ಮುದ್ದೇಗೌಡ, ಹೊನ್ನೇಗೌಡ, ಕೃಷ್ಣ, ಮಹಮ್ಮದ್‌ ನಖಿ, ವೈದ್ಯರಾದ ಡಾ. ರಘುನಾಥರೆಡ್ಡಿ, ಡಾ.ಜಗದೀಶ್‌, ಡಾ. ಕೃಪಾಶಂಕರ್‌.ಡಿ.ಎಸ್‌, ಡಾ.ಎಂ.ಎಸ್‌. ರಾಜ್‌ದೀಪ್‌, ಡಾ.ಎನ್‌.ಎಸ್‌.ಅನಿತ, ಡಾ.ಕವನ.ಕೆ, ಡಾ.ಬಸವರಾಜು, ಗ್ರಾಮಾಂತರ ಪ್ರೌಢಶಾಲೆಯ ಕಾರ್ಯದರ್ಶಿ ಡಿ.ಎಸ್‌.ಭುಜಂಗಯ್ಯ, ಮುಖ್ಯ ಶಿಕ್ಷಕ ನಂಜುಂಡಸ್ವಾಮಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.