ADVERTISEMENT

ಮಾಜಿ ಶಾಸಕರಿಂದ ಕಾಮಗಾರಿಗೆ ತಡೆ: ಶಾಸಕ ಇಕ್ಬಾಲ್ ಹುಸೇನ್ ಆರೋಪ‍

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 14:17 IST
Last Updated 14 ಜೂನ್ 2023, 14:17 IST
ಹಾರೋಹಳ್ಳಿ ತಾಲೂಕಿನ ದಿಂಬದಹಳ್ಳಿಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡಕ್ಕೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು
ಹಾರೋಹಳ್ಳಿ ತಾಲೂಕಿನ ದಿಂಬದಹಳ್ಳಿಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡಕ್ಕೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು   

ಹಾರೋಹಳ್ಳಿ: ‘ಚುನಾವಣೆಯಲ್ಲಿ ಸೋಲು–ಗೆಲುವು ಸಹಜ. ಅಧಿಕಾರ ಬರುತ್ತೆ, ಹೋಗುತ್ತದೆ. ಆದರೆ ಕ್ಷೇತ್ರದಲ್ಲಿ ಸೋತವರು ತಮ್ಮ ಅವಧಿಯಲ್ಲಿ ಆರಂಭಿಸಿದ್ದ ಕಾಮಗಾರಿಗಳನ್ನು ವಾಪಸ್ಸು ಪಡೆದಿದ್ದಾರೆ’ ಎಂದು ಶಾಸಕ ಇಕ್ಬಾಲ್ ಹುಸೇನ್ ಆರೋಪಿಸಿದರು.

ತಾಲ್ಲೂಕಿನ ದಿಂಬದಹಳ್ಳಿಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮತನಾಡಿದ ಅವರು, ಈ ಹಿಂದೆ ಶಾಸಕರಾಗಿದ್ದವರು ಹಲವು ಕಾಮಗಾರಿಗಳಿಗೆ ಅನುದಾನ ತಡೆಹಿಡಿಯುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಅದಕ್ಕೆ ನಾವು ಬಗ್ಗುವುದಿಲ್ಲ ಎಂದು ಹೇಳಿದರು. 

ಜನಸೇವೆಗೆ ಬದ್ಧವಾಗಿದ್ದೇವೆ. ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

ADVERTISEMENT

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದು ಆಗಬೇಕಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ದಿಂಬದಹಳ್ಳಿ ಸೇತುವೆಯನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಗ್ಯಾರಂಟಿಗಳು ಪಕ್ಕಾ: ಗ್ಯಾರಂಟಿ ಕುರಿತು ಮಾತನಾಡಿದ ಅವರು, ‘ಕೊಟ್ಟ ಮಾತಿಗೆ ನಾವು ಎಂದಿಗೂ ತಪ್ಪುವವರಲ್ಲ. ಈಗಾಗಲೇ ಎರಡು ಗ್ಯಾರಂಟಿ ಜಾರಿ ಮಾಡಲಾಗಿದೆ. ಮುಂದಿನ ತಿಂಗಳಿನಿಂದ ಅಕ್ಕಿ ವಿತರಿಸಲಾಗುವುದು. ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಹಣ ನೀಡಲಾಗುವುದು. ಅದಕ್ಕೆ ಸ್ವಲ್ಪ ಮಟ್ಟಿನ ಕಾಲಾವಕಾಶ ಬೇಕಿದೆ. ಅದಕ್ಕಾಗಿ ಜನತೆ ಕಾಯಬೇಕು. ಗ್ಯಾರಂಟಿಗಳು ಖಂಡಿತವಾಗಿ ಜಾರಿ ಆಗಲಿವೆ ಎಂದು ಹೇಳಿದರು.

ಇದಕ್ಕೂ ಮುನ್ನ ಹಾರೋಹಳ್ಳಿ ಪಟ್ಟಣದ ಕಲ್ಪವೃಕ್ಷ ಆಸ್ಪತ್ರೆ ಮತ್ತು ಡಯಾಗ್ನೋಸ್ಟಿಕ್ ಸೆಂಟರ್ ಅನ್ನು ಶಾಸಕ ಉದ್ಘಾಟಿಸಿದರು.

ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಅಶೋಕ್, ಸಾದೇನಹಳ್ಳಿ ಈಶ್ವರ್, ಶಿಲ್ಪಾ ಶಿವಾನಂದ್, ಗೂಗರೇದೊಡ್ಡಿ ಪರಮೇಶ್, ಪುಟ್ಟಮಣಿ ಪುಟ್ಟಸ್ವಾಮಿ, ಮದನ್ ಮೋಹನ್ ಹೊಳ್ಳ, ದಿಂಬದಹಳ್ಳಿ ಡೇರಿಯ ಅಧ್ಯಕ್ಷೆ ಅನಿತಾ ಮಹದೇವ್, ಉಪಾಧ್ಯಕ್ಷೆ ದೇವರಾಜಮ್ಮ, ಕಾರ್ಯದರ್ಶಿ ಜಯಲಕ್ಷ್ಮೀ, ನಿರ್ದೇಶಕರಾದ ಚಂದ್ರಮ್ಮ, ಮಹದೇವಮ್ಮ, ಚಂದ್ರಮ್ಮ, ಕಲ್ಪವೃಕ್ಷ ಡಯಾಗ್ನೊಸ್ಟಿಕ್ ಸೆಂಟರ್‌ನ ಕಾರ್ತಿಕ್, ಲಕ್ಷ್ಮೀ ನಾರಾಯಣ, ಸೋಮಶೇಖರ್, ನಂದಗೋಪಾಲ್, ಲಕ್ಷ್ಮಣ್‌, ಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.