ADVERTISEMENT

ಅಂಗವಿಕಲರು ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ: ಕೂನಮುದ್ದನಹಳ್ಳಿ ರುದ್ರೇಶ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 14:31 IST
Last Updated 27 ಡಿಸೆಂಬರ್ 2019, 14:31 IST
ಶುಕ್ರವಾರ ಅಂಗವಿಕಲ ಫಲಾನುಭವಿಗಳಿಗೆ ಫ್ಯಾನ್ ಗಳನ್ನು ವಿತರಿಸಲಾಯಿತು
ಶುಕ್ರವಾರ ಅಂಗವಿಕಲ ಫಲಾನುಭವಿಗಳಿಗೆ ಫ್ಯಾನ್ ಗಳನ್ನು ವಿತರಿಸಲಾಯಿತು   

ಕೂಟಗಲ್ (ರಾಮನಗರ) : ಸರ್ಕಾರಿ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅಂಗವಿಕಲರು ಅಭಿವೃದ್ಧಿ ಹೊಂದಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೂನಮುದ್ದನಹಳ್ಳಿ ರುದ್ರೇಶ್ ಹೇಳಿದರು.

ಇಲ್ಲಿನ ಕೂಟಗಲ್ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಪಂಚಾಯಿತಿ ವ್ಯಾಪ್ತಿಯ ನಾನಾ ಗ್ರಾಮಗಳ ಅಂಗವಿಕಲರಿಗೆ ಫ್ಯಾನ್‌ ವಿತರಿಸಿ ಅವರು ಮಾತನಾಡಿದರು.

ಅಂಗವಿಕಲರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಹಾಕಿಕೊಂಡಿವೆ. ಈ ಯೋಜನೆಗಳಡಿ ಅನೇಕ ಸೌಕರ್ಯಗಳು ಲಭ್ಯವಿರುತ್ತವೆ. ಯೋಜನೆಗಳ ಬಗ್ಗೆ ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸಂಸ್ಥೆಗಳಿಂದ ತಿಳಿದುಕೊಳ್ಳುವ ಮೂಲಕ ಅಂಗವಿಕಲರು ತಮಗಾಗಿಯೇ ಇರುವ ಸರ್ಕಾರಿ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ADVERTISEMENT

ಪಂಚಾಯಿತಿ ಅಭಿವೃಧಿ ಅಧಿಕಾರಿ ಮುನಿಯಪ್ಪ ಮಾತನಾಡಿ ಕೂಟಗಲ್ ಗ್ರಾಮ ಪಂಚಾಯಿತಿ ವತಿಯಿಂದ 2019-2020ನೇ ಸಾಲಿನ ಅನುದಾನದಡಿ ಶೇ 5ರ ಅನುಪಾತದಡಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಅಂಗವಿಕಲರಿಗೆ 75 ಫ್ಯಾನ್‍ ಗಳನ್ನು ವಿತರಿಸಲಾಯಿತು ಎಂದು ಮಾಹಿತಿ ನೀಡಿದರು.

ಗ್ರಾಮೀಣ ಪುನರ್ವಸತಿ ಕಾರ್ಯದರ್ಶಿ ಜಯಮ್ಮ, ಮುಖಂಡ ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.