ಹಾರೋಹಳ್ಳಿ: ವಯಾನಾಡ್‌ನ ಭೂಕುಸಿತ ಮತ್ತು ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಗುರುವಾರ ಹಾರೋಹಳ್ಳಿ ಮಾಡ್ರನ್ ಶಾಲೆಯ ಮಕ್ಕಳು ಅಭಿಯಾನ ನಡೆಸಿ, ದೇಣಿಗೆ ಸಂಗ್ರಹಿಸಿದರು.
ಅಭಿಯಾನಕ್ಕೆ ರಾಮನಗರ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಹಾರೋಹಳ್ಳಿ ಚಂದ್ರು ಚಾಲನೆ ನೀಡಿದರು. ಮಕ್ಕಳ ಉತ್ಸಾಹ ಕಂಡ ಪಟ್ಟಣದ ಜನತೆ ವಯಾನಾಡ್‌ನ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದು ಕೈಲಾದಷ್ಟನ್ನು ಸಹಾಯ ಮಾಡಿದರು. ಮುಖಂಡ ಅಗರ ಕುಮಾರ್, ಮಾಡ್ರನ್ ಶಾಲೆ ಕಾರ್ಯದರ್ಶಿ ಉಷಾ ರಘುರಾಮ್ ಗೌಡ, ಶಿಕ್ಷಕರಾದ ಪ್ರತಿಮಾ, ರೇಖಾ, ಕೃಷ್ಣ, ಅಖಿಲ, ಚಂದನಇನ್ನಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.