ADVERTISEMENT

ಸಮಾಜದ ಸುಧಾರಣೆ ಶಿಕ್ಷಕರಿಂದ ಸಾಧ್ಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 6:19 IST
Last Updated 19 ಸೆಪ್ಟೆಂಬರ್ 2024, 6:19 IST
ಸೋಲೂರು ಹೋಬಳಿಯ ಕಂಬದಕಲ್ಲು ಸರ್ಕಾರಿ ಶಾಲೆಯಲ್ಲಿ ಈಚೆಗೆ ಹೋಬಳಿ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸೋಲೂರು ಹೋಬಳಿಯ ಕಂಬದಕಲ್ಲು ಸರ್ಕಾರಿ ಶಾಲೆಯಲ್ಲಿ ಈಚೆಗೆ ಹೋಬಳಿ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.   

ಕುದೂರು: ಶಿಕ್ಷಕ ವೃತ್ತಿಯಂತಹ ಶ್ರೇಷ್ಠ ವೃತ್ತಿ ಮತ್ತೊಂದಿಲ್ಲ. ಅವರಿಂದಲೇ ಸಮಾಜದ ಸಮೃದ್ಧಿ ಹಾಗೂ ಸುಧಾರಣೆ ಸಾಧ್ಯ ಎಂದು ಇಸಿಒ ಗಂಗಾಧರ್ ತಿಳಿಸಿದರು.

ಸೋಲೂರು ಕಂಬದಕಲ್ಲು ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಲಾಗಿದ್ದ ಸೋಲೂರು ಹೋಬಳಿಯ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

ಕ್ಷೇತ್ರ ಸಂಪನ್ಮೂಲ ಅಧಿಕಾರಿ ಉಮೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಡಾ.ಎಸ್. ರಾಧಾಕೃಷ್ಣನ್ ಮತ್ತು ಸಾವಿತ್ರಿ ಬಾಫುಲೆ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸೇವಾದಳ ಸಮಿತಿ ಅಧ್ಯಕ್ಷ ಆರ್.ಎಸ್ ಬಸವರಾಜು, ಸಿ.ಆರ್.ಪಿ ಕನ್ಯಾಕುಮಾರಿ, ಶಿಕ್ಷಕ ಮಲ್ಲೂರು ಲೋಕೇಶ್, ನರಸಿಂಹಮೂರ್ತಿ, ಕಾಂತರಾಜು ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.