ADVERTISEMENT

ಆನೆ ದಾಳಿ: ಫಸಲು ನಾಶ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 15:00 IST
Last Updated 5 ಜುಲೈ 2021, 15:00 IST
ಕಾಡನಕುಪ್ಪೆ ಗ್ರಾಮದ ಸತೀಶ್‌ ಅವರ ತೋಟದಲ್ಲಿನ ತೆಂಗಿನಮರ ಆನೆ ದಾಳಿಯಿಂದ ನೆಲಕ್ಕೆ ಒರಗಿರುವುದು
ಕಾಡನಕುಪ್ಪೆ ಗ್ರಾಮದ ಸತೀಶ್‌ ಅವರ ತೋಟದಲ್ಲಿನ ತೆಂಗಿನಮರ ಆನೆ ದಾಳಿಯಿಂದ ನೆಲಕ್ಕೆ ಒರಗಿರುವುದು   

ರಾಮನಗರ: ತಾಲ್ಲೂಕಿನ ಕಾಡನಕುಪ್ಪೆ ಗ್ರಾಮದಲ್ಲಿ ಆನೆಗಳ ಹಿಂಡು ದಾಳಿ ಮಾಡಿದ್ದು, ವಿವಿಧ ಬೆಳೆಗಳನ್ನು ನಾಶಪಡಿಸಿವೆ.

ಭಾನುವಾರ ರಾತ್ರಿ ಕಾಡನಕುಪ್ಪೆ ಗ್ರಾಮದ ಸ್ವಾಮಿ ಎಂಬುವರಿಗೆ ಸೇರಿದ 5 ತೆಂಗಿನಮರ, ನೀರಿನ ಪೈಪ್, ಸತೀಶ್ ಅವರ ತೋಟದಲ್ಲಿನ 8 ತೆಂಗಿನಮರ, ಹನಿ ನೀರಾವರಿ ಪೈಪು, ಚಿಕ್ಕಕಾಡಯ್ಯ ಅವರ 4 ಮಾವಿನಮರ, 5 ತೆಂಗಿನಗಿಡ, ನೀರಿನ ಪೈಪುಗಳನ್ನು ಆನೆಗಳನ್ನು ನಾಶಪಡಿಸಿವೆ.

ಕಾವೇರಿ ವನ್ಯಜೀವಿಧಾಮದಿಂದ ಬಂದು ಕಳೆದ ಎರಡು ತಿಂಗಳಿಂದ ತೆಂಗಿನಕಲ್ಲು ಅರಣ್ಯದಲ್ಲಿ ಬೀಡು ಬಿಟ್ಟಿರುವ ಆನೆಗಳು ರಾತ್ರಿ ವೇಳೆ ಅರಣ್ಯದಂಚಿನ ಕಾಡನಕುಪ್ಪೆ, ಹೊಸದೊಡ್ಡಿ, ಕುರುಬಳಳ್ಳಿದೊಡ್ಡಿ, ತೆಂಗಿನಕಲ್ಲು, ದೇವರದೊಡ್ಡಿ, ನೆಲಮಲೆ ಗ್ರಾಮಗಳ ಆಸುಪಾಸಿನಲ್ಲಿ ಓಡಾಡುತ್ತ ವಿವಿಧ ಫಸಲು, ಮರ ಹಾಗೂ ಬೋರ್‌ವೆಲ್‌ ಪರಿಕರಗಳನ್ನು ನಾಶ ಮಾಡುತ್ತಲೇ ಇವೆ ಎಂದು ಸ್ಥಳೀಯರು ದೂರಿದರು.

ADVERTISEMENT

ಅರಣ್ಯಾಧಿಕಾರಿಗಳು ತೆಂಗಿನಕಲ್ಲು ಅರಣ್ಯದಲ್ಲಿ ಬೀಡುಬಿಟ್ಟ ಆನೆಗಳನ್ನು ಅವುಗಳ ಸ್ವಸ್ಥಾನ ಸೇರಿಸುವ ಕೆಲಸ ಮಾಡಬೇಕು. ಗ್ರಾಮದ ಆಸುಪಾಸಿನ ರೈತರ ಜಮೀನಿನ ಕಡೆ ಬರದಂತೆ ಆನೆಗಳನ್ನು ತಡೆಯಬೇಕು. ನಷ್ಟವಾದ ಬೆಳೆಗೆ ಸೂಕ್ತವಾದ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಅರಣ್ಯಾಧಿಕಾರಿಗಳನ್ನು ರೈತ ಸತೀಶ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.