
ಪ್ರಜಾವಾಣಿ ವಾರ್ತೆ
ಕನಕಪುರ ಬಿ.ಎಸ್ ದೊಡ್ಡಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಬಾಳೆ ಗಿಡಗಳನ್ನು ನಾಶಗೊಳಿಸಿರುವುದು
ಕನಕಪುರ: ಬಿ.ಎಸ್ ದೊಡ್ಡಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಸಮೃದ್ಧವಾಗಿ ಬೆಳೆದು ಗೊನೆ ಬಿಟ್ಟಿದ್ದ ಬಾಳೆ ಗಿಡಗಳನ್ನು ನಾಶಗೊಳಿಸಿರುವುದು ಶನಿವಾರ ರಾತ್ರಿ ನಡೆದಿದೆ.
ಹೊರಳಗಲ್ಲು ಸರ್ವೆ ನಂಬರ್ 101ರಲ್ಲಿ ಒಂದು ಎಕರೆ ಬಾಳೆ ತೋಟ ಆನೆ ದಾಳಿಗೆ ನಾಶಗೊಂಡಿದೆ. ಆನೆಗಳು ದಾಳಿ ನಡೆಸಿರುವ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳಾದ ಆರ್‌ಎಫ್‌ಒ ಜಗದೀಶ್ ಗೌಡ, ಆರ್‌ಎಫ್ಒ ಬಾಲಕೃಷ್ಣ, ಸಿಬ್ಬಂದಿ ಸುದೀಪ್, ಮಲ್ಲೇಶ ಬಾಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂತ್ರಸ್ತ ರೈತರಾದ ಸಾವಿತ್ರಮ್ಮ, ಶಿವಣ್ಣ ಗ್ರಾಮಸ್ಥರಾದ ಮನು, ಶಿವಶಂಕರ್, ಕೆಂಪೇಗೌಡ, ವೈರಮುಡಿಗೌಡ ಸ್ಥಳದಲ್ಲಿದ್ದರು.
ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಜೈರಾಮೇಗೌಡ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದರು.