ADVERTISEMENT

ರಾಮನಗರ: ಕುಂಬಾಪುರ ಸುತ್ತಮುತ್ತ ಆನೆ ಹಾವಳಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 4:02 IST
Last Updated 19 ಜೂನ್ 2021, 4:02 IST
ಆನೆ ದಾಳಿಯಿಂದ ನಾಶವಾದ ತೆಂಗಿನ ಮರ
ಆನೆ ದಾಳಿಯಿಂದ ನಾಶವಾದ ತೆಂಗಿನ ಮರ   

ರಾಮನಗರ: ತಾಲ್ಲೂಕಿನ ಕುಂಬಾಪುರ ಕಾಲೊನಿ ಸುತ್ತಮುತ್ತ ಆನೆ ದಾಳಿ ನಿರಂತರವಾಗಿದ್ದು, ತೋಟಗಳಿಗೆ ಓಡಾಡುವುದೇ ಕಷ್ಟವಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಈ ಗ್ರಾಮವಿದೆ. ಬಾಳೆ, ತೆಂಗು ಮುಂತಾದ ತೋಟಗಳಿವೆ. ಕಳೆದ 20 ದಿನಗಳಿಂದ ಆನೆಗಳ ದಾಳಿ ನಿರಂತರವಾಗಿದೆ. ಬಾಳೆ ತೋಟದಲ್ಲಿ ಅಳವಡಿಸಿದ್ದ ನೀರಾವರಿ ಪೈಪ್ ಲೈನ್‍ಗಳನ್ನು ಆನೆಗಳು ಕಿತ್ತೆಸೆದಿವೆ. ಬೆಳೆದು ನಿಂತ ಬಾಳೆಗಿಡಗಳನ್ನು ಕಿತ್ತು ಹಾಕಿವೆ. ತೆಂಗಿನ ಮರಗಳನ್ನು ಉರುಳಿಸಿವೆ ಎಂದು ಸ್ಥಳೀಯರಾದ ರಾಮಚಂದ್ರ ಎಂಬುವರು ದೂರಿದರು.

ಆನೆಗಳನ್ನು ಕಾಡಿಗೆ ಕಳುಹಿಸಿರುವುದಾಗಿ ಅರಣ್ಯ ಇಲಾಖೆಯವರು ಹೇಳುತ್ತಾರೆ. ಆದರೆ ಹಗಲು ಹೊತ್ತಿನಲ್ಲೇ ನಮ್ಮ ಕಾಲೊನಿ ಸುತ್ತಮುತ್ತ ಆನೆಗಳು ಓಡಾಡಿಕೊಂಡಿವೆ. ಹೀಗಾಗಿ ಮನೆಯಿಂದ ಹೊರಗೆ ಬರಲು ಹೆದರುವಂತೆ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಆನೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.