ADVERTISEMENT

ಕನಕಪುರ | ನಕಲಿ ಚಿನ್ನ ಅಡವಿಟ್ಟು ಸಾಲ: ವಂಚನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 2:12 IST
Last Updated 26 ಜುಲೈ 2025, 2:12 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಕನಕಪುರ: ಫೈನಾನ್ಸ್‌ ಕಂಪನಿಯಲ್ಲಿ ನಕಲಿ ಚಿನ್ನಾಭರಣ ಅಡಮಾನವಿಟ್ಟು ₹5.17 ಲಕ್ಷ ಸಾಲ ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದ್ದು, ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಮಣಪುರಂ ಗೋಲ್ಡ್‌ ಫೈನಾನ್ಸ್ ಕಂಪನಿಯಲ್ಲಿ ನಕಲಿ ಚಿನ್ನ ಅಡವಿಟ್ಟಿದ್ದು, ಆಡಿಟ್ ವೇಳೆ ಬೆಳಕಿಗೆ ಬಂದಿದೆ. ನಗರದ ಲಕ್ಷ್ಮೀಪುರ ವಾಸಿ ಶ್ವೇತ ಅವರು ಜುಲೈ 7 ರಂದು 51.7 ಗ್ರಾಂ ತೂಕದ ಕತ್ತಿನ ಚೈನ್ ಹಾಗೂ 31.2 ಗ್ರಾಂ ತೂಕದ ಓಲೆ ಜುಮುಕಿ ಮಾಟಿಯನ್ನು ಅಡಮಾನವಿಟ್ಟು ₹5.17 ಲಕ್ಷ ಹಣ ಸಾಲ ಪಡೆದಿದ್ದರು.

ADVERTISEMENT

ಜುಲೈ 11 ರಂದು ಕಂಪನಿಯ ಆಡಿಟ್ ವೇಳೆ ಚಿನ್ನಾಭರಣ ಪರಿಶೀಲಿಸಿದಾಗ ನಕಲಿ ಚಿನ್ನ ಎಂದು ತಿಳಿದಿದೆ. ಈ ಸಂಬಂಧ ಕಂಪನಿಯ ಹನೂರ್ ಕುಮಾರ್ ಪುರ ಪೊಲೀಸ್ ಠಾಣೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.