
ಪ್ರಜಾವಾಣಿ ವಾರ್ತೆ
ಚನ್ನಪಟ್ಟಣ: ತಪ್ಪಿಸಿಕೊಂಡಿದ್ದ ಹಸುವನ್ನು ಹುಡುಕಿಕೊಂಡು ಹೋದ ರೈತನೊಬ್ಬ ರಾಗಿ ಹೊಲದ ಸುತ್ತ ಹಾಕಿದ್ದ ವಿದ್ಯುತ್ ತಂತಿ ತುಳಿದು ಸ್ಥಳದದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಶ್ಯಾನಭೋಗನಹಳ್ಳಿ ಕಾರೇಕೊಪ್ಪ ಗ್ರಾಮಗಳ ನಡುವೆ ಸೋಮವಾರ ರಾತ್ರಿ ನಡೆದಿದೆ.
ಈರೇಗೌಡ (50) ಮೃತ ರೈತ. ತಮ್ಮ ಹೊಲದ ಬಳಿ ಕಟ್ಟಿಹಾಕಿದ್ದ ಹಸುವೊಂದು ತಪ್ಪಿಸಿಕೊಂಡ ಕಾರಣ ಅದನ್ನು ಹುಡುಕಿಕೊಂಡು ಹೋಗಿದ್ದರು. ರಾಗಿ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಹೊಲಕ್ಕೆ ವಿದ್ಯುತ್ ತಂತಿ ಅಳವಡಿಸಿದ್ದನ್ನು ಗಮನಿಸದೆ ಅದನ್ನು ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.