ADVERTISEMENT

ವಿವೇಕಾನಂದರ ವಿಚಾರಧಾರೆ ಪಾಲಿಸಿ: ಸಿ.ಕೆ. ರಾಮೇಗೌಡ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 3:21 IST
Last Updated 25 ಜನವರಿ 2021, 3:21 IST
ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿರುವ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ ಅವರನ್ನು ಸನ್ಮಾನಿಸಲಾಯಿತು
ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿರುವ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ ಅವರನ್ನು ಸನ್ಮಾನಿಸಲಾಯಿತು   

ಕನಕಪುರ: ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಭಾವೈಕ್ಯ, ಸಮಾನತೆಯ ಚಿಂತನೆ, ವಿಚಾರಧಾರೆ ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ತಿಳಿಸಿದರು.

ಇಲ್ಲಿನ ಬ್ಲಾಸಮ್‌ ಶಾಲೆ ಆವರಣದಲ್ಲಿ ಮಾತೃಶ್ರೀ ನಮನ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ನವಚೇತನ ಯುವಕರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ, ಜಾನಪದ ಗಾಯನ, ಉಪನ್ಯಾಸ ಹಾಗೂ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಕನಕಪುರ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ ಮಾತನಾಡಿ, ಹುಟ್ಟುತ್ತಾ ವಿಶ್ವಮಾನವರಾಗಿ, ಬೆಳೆಯುತ್ತಾ ಅಲ್ಪ ಮಾನವರಾಗುತ್ತಿರುವ ಈ ಕಾಲದಲ್ಲಿ ವಿವೇಕಾನಂದರ ದಿವ್ಯವಾಣಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ADVERTISEMENT

ಅನುದಾನರಹಿತ ಖಾಸಗಿ ಆಡಳಿತ ಮಂಡಳಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಪಟೇಲ್‌ ಸಿ. ರಾಜು, ಗ್ರಂಥಪಾಲಕ ಕೋಟೆಕೊಪ್ಪ ಕೆ. ವಿಜಯಕುಮಾರ್‌ ಹಾಗೂ ಮಾತೃಶ್ರೀ ನಮನ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಎಂ. ಚಂದ್ರ ಟ್ರಸ್ಟ್‌ನ ವಾರ್ಷಿಕ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ವೃಷಭೇಂದ್ರಮೂರ್ತಿ, ಸಂಸ್ಕೃತಿ ಸೌರಭ ಟ್ರಸ್ಟ್‌ ಅಧ್ಯಕ್ಷ ರಾ.ಬಿ. ನಾಗರಾಜು, ಕಸಾಪ ಜಿಲ್ಲಾ ಕಾರ್ಯದರ್ಶಿ ಕಾ.ಪ್ರಕಾಶ್‌, ಸ್ವಕರವೇ ಜಿಲ್ಲಾ ಅಧ್ಯಕ್ಷ ಕೆ.ಎಸ್‌. ಭಾಸ್ಕರ್‌, ಉಪನ್ಯಾಸಕಿ ಡಾ.ಆರ್‌. ರತ್ನಮ್ಮ, ಬ್ಲಾಸಮ್‌ ಶಾಲೆ ಪ್ರಾಂಶುಪಾಲರಾದ ಗಂಗಾಬಿಕಾ, ಚಂದ್ರಾಜ್‌, ರಾಜಣ್ಣ, ಶೋಭಾ, ರೂಪಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.