ADVERTISEMENT

ಚನ್ನಪಟ್ಟಣ | ಬೆಣ್ಣೆದೋಸೆಗೆ ಮನಸೋತವರೇ ಇಲ್ಲ

ಎಚ್.ಎಂ.ರಮೇಶ್
Published 28 ಜುಲೈ 2024, 5:12 IST
Last Updated 28 ಜುಲೈ 2024, 5:12 IST
<div class="paragraphs"><p>ಚನ್ನಪಟ್ಟಣದ ಜಗದೀಶ್ ಹೋಟೆಲ್‌ನಲ್ಲಿ ಸಿಗುವ ಸೆಟ್ ಬೆಣ್ಣೆ ದೋಸೆಗಾಗಿ ಕಾದು ಕುಳಿತ ದೋಸೆ ಪ್ರಿಯರು</p></div>

ಚನ್ನಪಟ್ಟಣದ ಜಗದೀಶ್ ಹೋಟೆಲ್‌ನಲ್ಲಿ ಸಿಗುವ ಸೆಟ್ ಬೆಣ್ಣೆ ದೋಸೆಗಾಗಿ ಕಾದು ಕುಳಿತ ದೋಸೆ ಪ್ರಿಯರು

ಚನ್ನಪಟ್ಟಣ: ನಗರದ ಎಂ.ಜಿ. ರಸ್ತೆ ಮಂಡಿಪೇಟೆ ಜಗದೀಶ್ ಹೋಟೆಲ್‌ನಲ್ಲಿ ಸಿಗುವ ಸೆಟ್ ಬೆಣ್ಣೆ ದೋಸೆ ಆಹಾರಪ್ರಿಯರ ಬಾಯಲ್ಲಿ ನೀರೂರಿಸುತ್ತದೆ.

ಸುಮಾರು 40 ವರ್ಷಗಳಿಂದ ಈ ಭಾಗದಲ್ಲಿ ಬೆಣ್ಣೆ ದೋಸೆಗೆ ಈ ಹೋಟೆಲ್ ಪ್ರಸಿದ್ಧಿ ಪಡೆದಿದೆ. ಬೆಣ್ಣೆ ದೋಸೆ ಸವಿಯಲೆಂದೆ ಬೆಂಗಳೂರು, ಮೈಸೂರು ಸೇರಿದಂತೆ ದೂರದ ಊರಗಳಿಂದ ಆಹಾರಪ್ರಿಯರು ಬರುತ್ತಾರೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಕಾರಿನಲ್ಲಿ ಹೋಗುವ ಪ್ರವಾಸಿಗರು ಬೆಳಗಿನ ಉಪಹಾರಕ್ಕೆ ಇಲ್ಲಿಗೆ ಬಂದು ದೋಸೆ ಸವಿದು ಹೊರಡುವುದು ವಾಡಿಕೆ.

ADVERTISEMENT

₹45 ದರಕ್ಕೆ ಬೆಣ್ಣೆದೋಸೆ ಸಿಗುತ್ತದೆ. ದೋಸೆಗೆ ನಂದಿನಿ ಬೆಣ್ಣೆ ಹಾಕಲಾಗುತ್ತದೆ. ಅದರ ಘಮ ಬಾಯಲ್ಲಿ ನೀರೂರಿಸುತ್ತದೆ. ದಿನವೊಂದಕ್ಕೆ ₹300ಕ್ಕೂ ಹೆಚ್ಚು ಬೆಣ್ಣೆ ದೋಸೆ ಇಲ್ಲಿ ಮಾರಾಟವಾಗುತ್ತದೆ. ಭಾನುವಾರ, ಸೋಮವಾರ, ಶನಿವಾರ ಹಾಗೂ ರಜಾ ದಿನಗಳಲ್ಲಿ 400ಕ್ಕೂ ಅಧಿಕ ಸೆಟ್ ದೋಸೆ ಮಾರಾಟವಾಗುತ್ತದೆ.

1984ರಲ್ಲಿ ಚನ್ನಪಟ್ಟಣದ ಜಗದೀಶ್ ಎಂಬುವರು ಬೆಣ್ಣೆ ದೋಸೆ ಹಾಕುವುದನ್ನು ಆರಂಭಿಸಿದರು. ಅಂದು ಅವರು ನೀಡಿದ ದೋಸೆ ರುಚಿಗೆ ಮನಸೋಲದವರೇ ಇಲ್ಲ. ಇವರನ್ನು ಬೆಣ್ಣೆ ದೋಸೆ ಜಗದೀಶ್ ಎಂತಲೇ ಅಂದು ಕರೆಯಲಾಗುತ್ತಿತ್ತು. ಅವರ ನಂತರ ಮಗ ಶಿವು ಅದನ್ನು ಮುಂದುವರಿಸಿದ್ದಾರೆ. ಈಗಲೂ ರುಚಿ, ಗುಣಮಟ್ಟದಲ್ಲಿ ರಾಜಿನೇ ಇಲ್ಲ ಎನ್ನುತ್ತಾರೆ ಬೆಣ್ಣೆ ದೋಸೆ ಪ್ರಿಯರು.

ಇವರ ಹೋಟೆಲ್‌ನಲ್ಲಿ ಪ್ರತಿದಿನ ಬೆಳಿಗ್ಗೆ 7ರಿಂದ 11ಗಂಟೆವರೆಗೆ ಹಾಗೂ ಸಂಜೆ 3ರಿಂದ 7ಗಂಟೆವರೆಗೆ ಬೆಣ್ಣೆ ದೋಸೆ ಸಿಗುತ್ತದೆ. ‌‌‌‌ಇದಕ್ಕಾಗಿ ದೋಸೆ ಪ್ರಿಯರು ಕಾದು ಕುಳಿತುಕೊಳ್ಳುತ್ತಾರೆ. ದೋಸೆ ತಿಂದು ಮನೆಗೂ ಕೊಂಡೊಯ್ಯುತ್ತಾರೆ. ಬೆಣ್ಣೆ ದೋಸೆ ಜತೆಗೆ ಮಸಾಲೆ ದೋಸೆ, ಖಾಲಿ ದೋಸೆ, ಸೆಟ್ ದೋಸೆ, ಇಡ್ಲಿ ಕೂಡ ಸಿಗುತ್ತದೆ. ಆದರೆ, ಬೆಣ್ಣೆ ದೋಸೆಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ.: ನಗರದ ಎಂ.ಜಿ. ರಸ್ತೆ ಮಂಡಿಪೇಟೆ ಜಗದೀಶ್ ಹೋಟೆಲ್‌ನಲ್ಲಿ ಸಿಗುವ ಸೆಟ್ ಬೆಣ್ಣೆ ದೋಸೆ ಆಹಾರಪ್ರಿಯರ ಬಾಯಲ್ಲಿ ನೀರೂರಿಸುತ್ತದೆ.

ಸುಮಾರು 40 ವರ್ಷಗಳಿಂದ ಈ ಭಾಗದಲ್ಲಿ ಬೆಣ್ಣೆ ದೋಸೆಗೆ ಈ ಹೋಟೆಲ್ ಪ್ರಸಿದ್ಧಿ ಪಡೆದಿದೆ. ಬೆಣ್ಣೆ ದೋಸೆ ಸವಿಯಲೆಂದೆ ಬೆಂಗಳೂರು, ಮೈಸೂರು ಸೇರಿದಂತೆ ದೂರದ ಊರಗಳಿಂದ ಆಹಾರಪ್ರಿಯರು ಬರುತ್ತಾರೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಕಾರಿನಲ್ಲಿ ಹೋಗುವ ಪ್ರವಾಸಿಗರು ಬೆಳಗಿನ ಉಪಹಾರಕ್ಕೆ ಇಲ್ಲಿಗೆ ಬಂದು ದೋಸೆ ಸವಿದು ಹೊರಡುವುದು ವಾಡಿಕೆ.

₹45 ದರಕ್ಕೆ ಬೆಣ್ಣೆದೋಸೆ ಸಿಗುತ್ತದೆ. ದೋಸೆಗೆ ನಂದಿನಿ ಬೆಣ್ಣೆ ಹಾಕಲಾಗುತ್ತದೆ. ಅದರ ಘಮ ಬಾಯಲ್ಲಿ ನೀರೂರಿಸುತ್ತದೆ. ದಿನವೊಂದಕ್ಕೆ ₹300ಕ್ಕೂ ಹೆಚ್ಚು ಬೆಣ್ಣೆ ದೋಸೆ ಇಲ್ಲಿ ಮಾರಾಟವಾಗುತ್ತದೆ. ಭಾನುವಾರ, ಸೋಮವಾರ, ಶನಿವಾರ ಹಾಗೂ ರಜಾ ದಿನಗಳಲ್ಲಿ 400ಕ್ಕೂ ಅಧಿಕ ಸೆಟ್ ದೋಸೆ ಮಾರಾಟವಾಗುತ್ತದೆ.

1984ರಲ್ಲಿ ಚನ್ನಪಟ್ಟಣದ ಜಗದೀಶ್ ಎಂಬುವರು ಬೆಣ್ಣೆ ದೋಸೆ ಹಾಕುವುದನ್ನು ಆರಂಭಿಸಿದರು. ಅಂದು ಅವರು ನೀಡಿದ ದೋಸೆ ರುಚಿಗೆ ಮನಸೋಲದವರೇ ಇಲ್ಲ. ಇವರನ್ನು ಬೆಣ್ಣೆ ದೋಸೆ ಜಗದೀಶ್ ಎಂತಲೇ ಅಂದು ಕರೆಯಲಾಗುತ್ತಿತ್ತು. ಅವರ ನಂತರ ಮಗ ಶಿವು ಅದನ್ನು ಮುಂದುವರಿಸಿದ್ದಾರೆ. ಈಗಲೂ ರುಚಿ, ಗುಣಮಟ್ಟದಲ್ಲಿ ರಾಜಿನೇ ಇಲ್ಲ ಎನ್ನುತ್ತಾರೆ ಬೆಣ್ಣೆ ದೋಸೆ ಪ್ರಿಯರು.

ಇವರ ಹೋಟೆಲ್‌ನಲ್ಲಿ ಪ್ರತಿದಿನ ಬೆಳಿಗ್ಗೆ 7ರಿಂದ 11ಗಂಟೆವರೆಗೆ ಹಾಗೂ ಸಂಜೆ 3ರಿಂದ 7ಗಂಟೆವರೆಗೆ ಬೆಣ್ಣೆ ದೋಸೆ ಸಿಗುತ್ತದೆ. ‌‌‌‌ಇದಕ್ಕಾಗಿ ದೋಸೆ ಪ್ರಿಯರು ಕಾದು ಕುಳಿತುಕೊಳ್ಳುತ್ತಾರೆ. ದೋಸೆ ತಿಂದು ಮನೆಗೂ ಕೊಂಡೊಯ್ಯುತ್ತಾರೆ. ಬೆಣ್ಣೆ ದೋಸೆ ಜತೆಗೆ ಮಸಾಲೆ ದೋಸೆ, ಖಾಲಿ ದೋಸೆ, ಸೆಟ್ ದೋಸೆ, ಇಡ್ಲಿ ಕೂಡ ಸಿಗುತ್ತದೆ. ಆದರೆ, ಬೆಣ್ಣೆ ದೋಸೆಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.