ADVERTISEMENT

ಗಣೇಶ ಚತುರ್ಥಿ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 5:08 IST
Last Updated 12 ಸೆಪ್ಟೆಂಬರ್ 2021, 5:08 IST
ಗಣೇಶ ಚತುರ್ಥಿ ಅಂಗವಾಗಿ ಮಾಗಡಿಯ ರಂಗನಾಥ ಎಲೆಕ್ಟ್ರಿಕ್‌ ಶಾಪ್‌ನಲ್ಲಿ ಮಿಕ್ಸಿ ಸೇರಿದಂತೆ ಇತರೆ ಉಪಕರಣಗಳಿಂದ ಗಣಪತಿ ತಯಾರಿಸಿ ಪೂಜಿಸಲಾಯಿತು
ಗಣೇಶ ಚತುರ್ಥಿ ಅಂಗವಾಗಿ ಮಾಗಡಿಯ ರಂಗನಾಥ ಎಲೆಕ್ಟ್ರಿಕ್‌ ಶಾಪ್‌ನಲ್ಲಿ ಮಿಕ್ಸಿ ಸೇರಿದಂತೆ ಇತರೆ ಉಪಕರಣಗಳಿಂದ ಗಣಪತಿ ತಯಾರಿಸಿ ಪೂಜಿಸಲಾಯಿತು   

ಮಾಗಡಿ: ತಾಲ್ಲೂಕಿನಾದ್ಯಂತ ಶುಕ್ರವಾರ ಗಣೇಶ ಚತುರ್ಥಿಯನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಕೆಲವರು ಮನೆಯಲ್ಲೂ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸಿದರು. ಪಟ್ಟಣದ ಕಲ್ಯಾಬಾಗಿಲು ರಂಗನಾಥ್‌ ಎಲೆಕ್ಟ್ರಿಕ್‌ ಅಂಗಡಿಯಲ್ಲಿ ಮಿಕ್ಷಿ ಸೇರಿದಂತೆ ಇತರೆ ಯಂತ್ರಗಳನ್ನೇ ಗಣೇಶ ವಿಗ್ರಹದಂತೆ ಜೋಡಿಸಿ ಪೂಜಿಸಿದರು.

ಕಲ್ಯಾಬಾಗಿಲು ಸಾರ್ವಜನಿಕ ವಿನಾಯಕ ಸ್ವಾಮಿ ದೇವಾಲಯದಲ್ಲಿ ಗಣಪತಿ ಹೋಮ, ಅಭಿಷೇಕ ನೆರವೇರಿಸಿ ವಿಶೇಷವಾಗಿ ವಿನಾಯಕ ಚತುರ್ಥಿ ಆಚರಿಸಲಾಗುತ್ತಿದೆ. ಒಂಬತ್ತು ದಿನಗಳ ಕಾಲ ನಿತ್ಯ ವಿಶೇಷ ಪೂಜೆ ನಡೆಸಿ, ಸೇವಾಕರ್ತರು ಪ್ರಸಾದ ವಿತರಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.