
ಪ್ರಜಾವಾಣಿ ವಾರ್ತೆರಾಮನಗರ: ಮಾಗಡಿ ತಾಲ್ಲೂಕಿನ ಗವಿ ನಾಗಮಂಗಲ ಗೇಟ್ ಬಳಿ ಮಂಗಳವಾರ ಬೆಳಗ್ಗೆ ಜೆಸಿಬಿ ವಾಹನ ಡಿಕ್ಕಿಯಾಗಿ ಬಿ.ಕಾಂ. ವಿದ್ಯಾರ್ಥಿನಿ ಚೈತ್ರಾ (20) ಸ್ಥಳದಲ್ಲೇ ಮೃತಪಟ್ಟರು.
ನಂಜಯ್ಯನಪಾಳ್ಯ ನಿವಾಸಿಯಾದ ಚೈತ್ರಾ ಕರಲಮಂಗಲ ಗ್ರಾಮದಲ್ಲಿ ಇರುವ ಡೇರಿಗೆ ಸ್ಕೂಟರಿನಲ್ಲಿ ಹಾಲು ಕೊಂಡೊಯ್ದಿದ್ದರು. ಹಾಲು ಹಾಕಿ ಮನೆಗೆ ವಾಪಸ್ ಆಗುವ ವೇಳೆ ರಾಮನಗರ- ಮಾಗಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿತು. ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.