ಹಾರೋಹಳ್ಳಿ: ಕಗ್ಗಲಹಳ್ಳಿಯಲ್ಲಿ ಸ್ಮಶಾನವಿಲ್ಲದೆ ದಲಿತ ಸಮುದಾಯದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ಪರದಾಡವಂತಾಯಿತು.
ಕಗ್ಗಲಹಳ್ಳಿ ದಲಿತರು ಹಲವು ವರ್ಷಗಳಿಂದಲೂ ಸ್ಮಶಾನಕ್ಕಾಗಿ ಮನವಿ ಸಲ್ಲಿಸಿದರೂ ತಾಲ್ಲೂಕು ಆಡಳಿತ ಯಾವುದೇ ರೀತಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ತಹಶೀಲ್ದಾರ್ ಸಿ.ಆರ್.ಶಿವಕುಮಾರ್, ದಲಿತರಿಗೆ ಸ್ಮಶಾನ ಇಲ್ಲದ ವಿಷಯ ತಿಳಿದ ಕೂಡಲೇ ಒಂದು ಎಕರೆ ಜಾಗ ಸ್ಮಶಾನಕ್ಕಾಗಿ ಗುರುತಿಸಿ, ಅಲ್ಲಿಯೇ ಸಂಸ್ಕಾರ ಮಾಡಲು ಸೂಚಿಸಿದರು.
ತಹಶೀಲ್ದಾರ್ ಸೂಚನೆಯಂತೆ ಸ್ಥಳಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಈಶ್ವರ್, ‘ನನಗೆ ಮೊದಲೇ ಹೇಳಿದ್ದರೆ ನಿಮ್ಮ ಕೆಲಸ ಆಗುತ್ತಿತ್ತು. ಇದೀಗ ಸರ್ವೆ ನಂ.79ರಲ್ಲಿ ಜಾಗ ಗುರುತಿಸಲಾಗಿದೆ’ ಎಂದರು. ಈ ಮಾತು ಉದ್ಥಟತನದಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದರು.
ಗ್ರಾಮದ ದಲಿತರಿಗೆ ಶಾಶ್ವತವಾಗಿ ಸ್ಮಶಾನಭೂಮಿ ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಹೊಸದುರ್ಗ ಒತ್ತಾಯಿಸಿದ್ದಾರೆ.
ಗ್ರಾಮಸ್ಥರಾದ ಸಂಜೀವ, ವೆಂಕಟರಮಣಯ್ಯ, ಸ್ವಾಮಿ, ಶಿವ, ಗಿರಿದಾಸಯ್ಯ, ಕರಿಯಪ್ಪ, ವೆಂಕಟಾಚಲಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.