ADVERTISEMENT

ಗ್ರಾಮೀಣ ಕಲೆ ಉಳಿಸಲು ‘ಹಳ್ಳಿ ಹಬ್ಬ’: ಕೆಬಿಎಸ್ ಸಿದ್ದರಾಜು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:40 IST
Last Updated 20 ಫೆಬ್ರುವರಿ 2026, 4:40 IST
ಕನಕಪುರ ರೋಟರಿ ಭವನದಲ್ಲಿ ನಡೆದ ಸಭೆಯಲ್ಲಿ ಹಳ್ಳಿ ಹಬ್ಬ ಕಾರ್ಯಕ್ರಮ ಕುರಿತು ಕೆಬಿಎಸ್ ಸಿದ್ದರಾಜು ಮಾತನಾಡಿದರು. ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು
ಕನಕಪುರ ರೋಟರಿ ಭವನದಲ್ಲಿ ನಡೆದ ಸಭೆಯಲ್ಲಿ ಹಳ್ಳಿ ಹಬ್ಬ ಕಾರ್ಯಕ್ರಮ ಕುರಿತು ಕೆಬಿಎಸ್ ಸಿದ್ದರಾಜು ಮಾತನಾಡಿದರು. ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು   

‌ಕನಕಪುರ: ಪ್ರಾಚೀನ ಗ್ರಾಮೀಣ ಕಲೆ ಉಳಿಸಿ ಬೆಳೆಸುವ ಹಾಗೂ ಈಗಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ರೋಟರಿ ಸಂಸ್ಥೆ ವತಿಯಿಂದ ‘ಹಳ್ಳಿ ಹಬ್ಬ’ ಎಂಬ ವಿನೂತನ ಕಾರ್ಯಕ್ರಮವನ್ನು ಬನವಾಸಿ ಶಾಲೆಯಲ್ಲಿ ಫೆ.20 ಮತ್ತು 21ರಂದು ಆಯೋಜಿಸಲಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಕೆಬಿಎಸ್ ಸಿದ್ದರಾಜು ತಿಳಿಸಿದರು.

ಇಲ್ಲಿನ ರೋಟರಿ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಬೆಂಗಳೂರು ಮೆಟ್ರೊ, ರೋಟರಿ ಸೌತ್ ಎಂಡ್, ರೋಟರಿ ಸೌತ್ ಸಮರ್ಪಣೆ, ಹಾರೋಹಳ್ಳಿ ಮತ್ತು ಕನಕಪುರ ರೋಟರಿ ಆಶ್ರಯದಲ್ಲಿ ಬನವಾಸಿ ಸರ್ಕಾರಿ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಗ್ರಾಮೀಣ ಸೊಗಡಿನ ಹಳ್ಳಿ ಕಾರ್ಯಕ್ರಮಗಳ ಮರುಸೃಷ್ಟಿಯೊಂದಿಗೆ ನಡೆಯಲಿದೆ ಎಂದರು.

ಖಜಾಂಚಿ ಭಾನುಪ್ರಕಾಶ್ ಮಾತನಾಡಿ, ಗ್ರಾಮೀಣ ಸಂಸ್ಕೃತಿ ಮತ್ತು ಕ್ರೀಡೆಗಳಿಗಾಗಿ ಹಳ್ಳಿ ಹಬ್ಬ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಜಾಗೃತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ನಡೆಯಲಿದೆ. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕುರಿತು ಮಾರ್ಗದರ್ಶನ ನೀಡಲಾಗುವುದು. ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸರ್ವೈಕಲ್ ಕ್ಯಾನ್ಸರ್ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ADVERTISEMENT

ಮಕ್ಕಳಿಗೆ ಪ್ಲಾನಿಟೋರಿಯಂ ಮತ್ತು ಟೆಲಿಸ್ಕೋಪ್ ಮೂಲಕ ಚಂದ್ರಲೋಕ ಮತ್ತು ನಕ್ಷತ್ರಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಶಾಲೆಗಳಿಗೆ ಕ್ರೀಡಾ ಸಾಮಗ್ರಿ ಹಾಗೂ ಶುದ್ಧ ನೀರಿನ ಘಟಕ ವಿತರಿಸಲಾಗುವುದು. ಕಗ್ಗಲಹಳ್ಳಿ ಸರ್ಕಾರಿ ಶಾಲೆಯಲ್ಲಿ ₹7.5ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಹಳ್ಳಿ ಹಬ್ಬದಲ್ಲಿ ರಂಗೋಲಿ ಸ್ಪರ್ಧೆ, ಕಬಡ್ಡಿ, ಚಿನ್ನಿದಾಂಡು, ಹಗ್ಗಜಗ್ಗಾಟ ಸೇರಿದಂತೆ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. ರಾಗಿ ಮತ್ತು ಭತ್ತದ ರಾಶಿ ಹಾಕಿ ಸುಗ್ಗಿ ವಾತಾವರಣ ನಿರ್ಮಿಸಿ ರಾಶಿ ಪೂಜೆ ನೆರವೇರಿಸಲಾಗುವುದು. ಸಂಜೆ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಹಳ್ಳಿ ಸಂಸ್ಕೃತಿ ವಿದೇಶಗಳಿಗೆ ಪರಿಚಯಿಸಲು ಯುಎಸ್ಎ ಸೇರಿದಂತೆ ವಿವಿಧ ದೇಶಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ಜಾನಪದ ಕಲಾತಂಡಗಳೊಂದಿಗೆ ಎತ್ತಿನ ಬಂಡಿಯಲ್ಲಿ ವಿದೇಶಿ ಗಣ್ಯರನ್ನು ಕರೆತರಲಾಗುವುದು. ಕ್ರೀಡಾ ವಿಜೇತರಿಗೆ ವಿದೇಶಿ ಗಣ್ಯರಿಂದಲೇ ಬಹುಮಾನ ವಿತರಿಸಲಾಗುವುದು. ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಿದ್ದರಾಜು ಮನವಿ ಮಾಡಿದರು.

 ಹಾರೋಹಳ್ಳಿ ರೋಟರಿ ಅಧ್ಯಕ್ಷ ನಾಗರಾಜು, ಕನಕಪುರ ರೋಟರಿ ಕಾರ್ಯದರ್ಶಿ ಮುನಿರಾಜು, ಪದಾಧಿಕಾರಿಗಳಾದ ವೆಂಕಟೇಶ್, ದೇಸಾಯಿ, ರಾಮಚಂದ್ರ, ಚಂದ್ರಪ್ರಭ, ಚಿಕ್ಕಸ್ವಾಮಿ ಉಪಸ್ಥಿತರಿದ್ದರು.

ಕನಕಪುರ: ಪ್ರಾಚೀನವಾದ ನಮ್ಮ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸಲು, ಈಗಿನ ಜನರಿಗೆ ಪರಿಚಯಿಸಲು ರೋಟರಿ ಸಂಸ್ಥೆ ವತಿಯಿಂದ ಹಳ್ಳಿ ಹಬ್ಬ ಎಂಬ ವಿನೂತನ ಕಾರ್ಯಕ್ರಮವನ್ನು ಬನವಾಸಿ ಶಾಲೆಯಲ್ಲಿ ಫೆಬ್ರವರಿ 20 ಮತ್ತು 21ರಂದು ನಡೆಸುತಿದ್ದೇವೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಕೆಬಿಎಸ್ ಸಿದ್ದರಾಜು ತಿಳಿಸಿದರು.

ಇಲ್ಲಿನ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಳ್ಳಿಯಬ್ಬ ಕಾರ್ಯಕ್ರಮ ಕುರಿತು ಮಾತನಾಡಿದರು.

ರೋಟರಿ ಬೆಂಗಳೂರು ಮೆಟ್ರೋ, ರೋಟರಿ ಸೌತ್ ಎಂಡ್, ರೋಟರಿ ಸೌತ್ ಸಮರ್ಪಣೆ, ಹಾರೋಹಳ್ಳಿ ಮತ್ತು ಕನಕಪುರ ರೋಟರಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಾರೋಹಳ್ಳಿ ತಾಲ್ಲೂಕು ಬನವಾಸಿ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ, ಗ್ರಾಮೀಣ ಸೊಗಡಿನ ಹಳ್ಳಿ ಕಾರ್ಯಕ್ರಮಗಳ ಮರು ಸೃಷ್ಟಿಯೊಂದಿಗೆ ಕಾರ್ಯಕ್ರಮ ನಡಿಯಲಿದೆ ಎಂದರು.

ಖಜಾಂಚಿ ಭಾನುಪ್ರಕಾಶ್ ಮಾತನಾಡಿ ಗ್ರಾಮೀಣ ಸಂಸ್ಕೃತಿ, ಗ್ರಾಮೀಣ ಕ್ರೀಡಗಳಿಗಾಗಿ ಹಳ್ಳಿ ಹಬ್ಬ ಕಾರ್ಯಕ್ರಮ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಜಾಗೃತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಯಾವ ರೀತಿ ಸಜ್ಜುಗೊಳಿಸಬೇಕು ಎಂಬುದರ ಬಗ್ಗೆ ಕಾರ್ಯಕ್ರಮ ನಡೆಯಲಿದೆ, ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸರ್ವಿಸಿಟಿಕಲ್ ಕ್ಯಾನ್ಸರ್ ತಡೆ ಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ನಡೆಯುತ್ತಿದೆ ಎಂದರು.

ಮಕ್ಕಳಿಗೆ ಪ್ಲಾನಿಟೋರಿಯಂ ಮತ್ತು ಟೆಲಿಸ್ಕೋಪ್ ಗಳ ಮೂಲಕ ಚಂದ್ರಲೋಕ, ನಕ್ಷತ್ರಗಳ ವೀಕ್ಷಣೆ ಮತ್ತು ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ, ಶಾಲೆಗಳಿಗೆ ಕ್ರೀಡಾ ಸಾಮಗ್ರಿ ಹಾಗೂ ಶುದ್ಧ ನೀರಿನ ಘಟಕ ವಿತರಣೆ ಮಾಡಲಿದ್ದೇವೆ, ಕಗ್ಗಲಹಳ್ಳಿ ಸರ್ಕಾರಿ ಶಾಲೆಯಲ್ಲಿ 7.5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶೌಚಾಲಯ ಉದ್ಘಾಟನೆ ಆಗಲಿದೆ ಎಂದು ಮಾಹಿತಿ ನೀಡಿದರು.

ಹಳ್ಳಿ ಹಬ್ಬದಲ್ಲಿ ರಂಗೋಲಿ ಸ್ಪರ್ಧೆ, ಕಬ್ಬಡ್ಡಿ, ಚಿನ್ನಿ ದಾಂಡು, ಹಗ್ಗ ಜಗ್ಗಾಟ, ಕ್ರೀಡೆಗಳನ್ನು ಆಯೋಜಿಸಲಾಗಿದೆ. ರಾಗಿ ಭತ್ತ ರಾಶಿ ಹಾಕಿ ಸುಗ್ಗಿ ವಾತಾವರಣ ನಿರ್ಮಿಸಿ ರಾಶಿ ಪೂಜೆ ನೆರವೇರಿಸಿ ಸಂಜೆ ನೃತ್ಯ ಕಾರ್ಯಕ್ರಮ ನಡೆಸಲಾಗುವುದು.

ನಮ್ಮ ಹಳ್ಳಿ ಸಂಸ್ಕೃತಿಯನ್ನು ಬೇರೆ ಬೇರೆ ದೇಶಗಳಿಗೆ ಪರಿಚಯಿಸಲು ಕಾರ್ಯಕ್ರಮಕ್ಕೆ ಯುಎಸ್ ಸೇರಿದಂತೆ ವಿವಿಧ ದೇಶಗಳ ಗಣ್ಯರನ್ನು ಆಹ್ವಾನಿಸಿದ್ದು, ಜಾನಪದ ಕಲಾತಂಡಗಳೊಂದಿಗೆ ಎತ್ತಿನ ಬಂಡಿಯಲ್ಲಿ ವಿದೇಶಿ ಗಣ್ಯರನ್ನು ಕರೆತರಲಾಗುವುದು ಎಂದರು.

ಕ್ರೀಡೆಗಳಲ್ಲಿ ವಿಜೇತರಾದವರಿಗೆ ವಿದೇಶಿ ಗಣ್ಯರಿಂದಲೇ ಬಹುಮಾನ ವಿತರಿಸಲಾಗುವುದು ಎಂದು ಕಾರ್ಯಕ್ರಮದ ಬಗ್ಗೆ ತಿಳಿಸಿದ ಅವರು ವಿಶೇಷವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಾರೋಹಳ್ಳಿ ರೋಟರಿ ಅಧ್ಯಕ್ಷ ನಾಗರಾಜು, ಕನಕಪುರ ರೋಟರಿ ಕಾರ್ಯದರ್ಶಿ ಮುನಿರಾಜು, ಪದಾಧಿಕಾರಿಗಳಾದ ವೆಂಕಟೇಶ್, ದೇಸಾಯಿ, ರಾಮಚಂದ್ರ, ಚಂದ್ರಪ್ರಭ, ಚಿಕ್ಕ ಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.