ಹಾರೋಹಳ್ಳಿ: ಗ್ರಾಮೀಣ ಪರಂಪರೆ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅದ್ದೂರಿ ದಸರಾ ಮಹೋತ್ಸವ ನಡೆಯಲಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಈ ಉತ್ಸವ ಆಚರಿಸಲಾಗುವುದು.
ದಸರಾ ಸಮಿತಿ ಅಧ್ಯಕ್ಷ ಗೌತಮ್ ಮರಿಲಿಂಗೇಗೌಡ, ಅರುಣಾಚಲೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದರು.
ಉತ್ಸವದ ಮುಖ್ಯ ಆಕರ್ಷಣೆಗಳಲ್ಲಿ ಬನ್ನಿಪೂಜೆ, ಅಮೋಘ ಮದ್ದುಗುಂಡು ಮತ್ತು ಬಾಣಬಿರುಸು ಪ್ರದರ್ಶನ ಇರಲಿದೆ. ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಸರ್ವಾಲಂಕೃತ ಬೆಳ್ಳಿ ರಥದಲ್ಲಿ ಪ್ರಮುಖ ರಸ್ತೆಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುವುದು. ಹೂವಿನ ಪಲ್ಲಕ್ಕಿ, ಮಂಗಳವಾದ್ಯ, ವಿವಿಧ ನೃತ್ಯ ಮತ್ತು ಕಲಾ ಪ್ರದರ್ಶನ ಇರಲಿದೆ.
ಸೆ.28ರಂದು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿದೆ.
ದುರ್ಗಾಷ್ಠಮಿ ದಿನ ಮಹಿಳಾ ಮಂಡಳಿಯವರಿಗೆ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆನಂದ್ ಗುರೂಜಿ ಉತ್ಸವ ಉದ್ಘಾಟಿಸಲಿದ್ದಾರೆ.
ಧರ್ಮದರ್ಶಿ ಎಂ.ಮಲ್ಲಪ್ಪ, ಕಳೆದ 9 ವರ್ಷಗಳಿಂದ ಈ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಆದಿತ್ಯ ರಸರಂಜನ್, ಸಂಚಾಲಕ ಎಚ್.ಎಸ್.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಮಾಲತಿ ಶಿವನಾಗ್ ಸೇರಿದಂತೆ ಸಮಿತಿ ಸದಸ್ಯರು ಇದ್ದರು.
ಹಾರೋಹಳ್ಳಿ: ಗ್ರಾಮೀಣ ಪರಂಪರೆ ಮತ್ತು ಸಂಸ್ಕೃತಿಯನ್ನು ವಿಭಿನ್ನ ಸಾಂಸ್ಕೃತಿಕ ಕಲಾಮಾಧ್ಯಮದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ವರ್ಣರಂಜಿತ ಮತ್ತು ವೈಭವಯುತ 9ನೇ ವರ್ಷದ ಹಾರೋಹಳ್ಳಿ ದಸರಾ ಮಹೋತ್ಸವ ಸೆ.22ರ ಸೋಮವಾರದಿಂದ ಅ.2ರ ಬುಧವಾರದವರೆಗೆ 9 ದಿನಗಳ ಕಾಲ ಅದ್ಧೂರಿ ದಸರಾ ಮಹೋತ್ಸವ ನಡೆಯಲಿದೆ ಎಂದು ಹಾರೋಹಳ್ಳಿ ದಸರಾ ಆಚರಣ ಸಮಿತಿ ಅಧ್ಯಕ್ಷ ಗೌತಮ್‌ಮರಿಲಿಂಗೇಗೌಡ ತಿಳಿಸಿದರು.
ಹಾರೋಹಳ್ಳಿ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯದಲ್ಲಿ ದಸರಾ ಆಚರಣೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವ ಉದ್ಘಾಟನೆಯನ್ನು ಬ್ರಹ್ಮಶ್ರೀ ಡಾ.ಶ್ರೀ ಆನಂದ್‌ಗುರೂಜಿ ನೆರವೇರಿಸಲಿಸಲಿದ್ದಾರೆ. ಗುರುವಾರ ಸಂಜೆ 4:30ಕ್ಕೆ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯ ಮುಂಭಾಗದಿಂದ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅದೇದಿನ ರಾತ್ರಿ 8:30ಕ್ಕೆ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಬನ್ನಿಪೂಜೆ ಹಾಗು ರಾತ್ರಿ 9:30 ರ ನಂತರ ಬಸ್ ನಿಲ್ದಾಣ ಸಮೀಪದ ಸರ್ಕಾರಿ ಶಾಲಾ ಮೈದಾನದಲ್ಲಿ ಅಮೋಘ ಮದ್ದುಗುಂಡು, ಬಾಣಬಿರುಸು ಪ್ರದರ್ಶನದಲ್ಲಿ ಅಂಧಕಾಸುರನ ವಧೆಯಲ್ಲಿ ಕಣ್ಮನ ತಣಿಸುವ ಮದ್ದುಗುಂಡುಗಳ ಪ್ರದರ್ಶನ ನಡೆಯಲಿದೆ. ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಭಕ್ತರು ನಾಡಹಬ್ಬ ಅದ್ಧೂರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಕಣ್ತುಂಬಿಸಿಕೊಳ್ಳುವAತೆ ಮನವಿ ಮಾಡಿದರು.
ವಿಜೃಂಭಣೆ ದಸರಾ: ಅರುಣಾಚಲೇಶ್ವರ ದೇವಾಲಯ ಧರ್ಮದರ್ಶಿ ಎಂ.ಮಲ್ಲಪ್ಪ ಮಾತನಾಡಿ ಕಳೆದ 9 ವರ್ಷಗಳಿಂದ ನಾಡಹಬ್ಬ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ವಿಶೇಷವಾಗಿ ಧಾರ್ಮಿಕ ವಿಧಿ ವಿಧಾನಗಳಿಂದ ವೈಭವಯುತ ಆಚರಣೆ ನಡೆಸಲು ಸಮಿತಿ ತೀರ್ಮಾನಿಸಿದೆ. ಇದರಿಂದ ನಾಡಹಬ್ಬವಾಗಿ, ಜನಪರ ಉತ್ಸವ ಆಗಬೇಕು ಎನ್ನುವ ನಿಟ್ಟಿನಲ್ಲಿ ವಿಜೃಂಭಣೆಯಿAದ ಆಕರ್ಷಣೆ ಹಾಗು ಅರ್ಥಪೂರ್ಣವಾಗಿ ಹಬ್ಬ ಆಚರಿಸಲಾಗುವುದು ಎಂದರು.
ಇನ್ನು ಅದ್ಧೂರಿ ದಸರಾ ಉತ್ಸವ ಮೆರವಣಿಗೆಯಲ್ಲಿ ಸರ್ವಾಲಂಕೃತ ಬೆಳ್ಳಿರಥದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಹಾರೋಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು. ಹೂವಿನ ಪಲ್ಲಕ್ಕಿ, ಮಂಗಳವಾದ್ಯ, ಚಿಲಿಪಿಲಿ ಬೊಂಬೆ, ನಾಯಂಡಿ ಕರಗ ನೃತ್ಯ, ಡೊಳ್ಳು ಕುಣಿತ, ನೃತ್ಯ, ವೀರಗಾಸೆ, ಪೂಜಾ-ಪಟ ಕುಣಿತ, ಮೆ`ಸೂರು ನಗಾರಿ ಇತ್ಯಾದಿ ಕಲಾತಂಡಗಳೊAದಿಗೆ ಮೆರವಣಿಗೆ ಸಾಗಲಿದೆ. ಸಾರ್ವಜನಿಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ: ದೇಸೀ ರೋಮಾಂಚಕ ಕ್ರೀಡೆಯಾದ ಕುಸ್ತಿ ಪಂದ್ಯಾವಳಿಯನ್ನು ಸೆ.28ರ ಭಾನುವಾರ ಬೆಳಿಗ್ಗೆ 9:30 ರಿಂದ ಮಹಿಳೆರು, ಮಕ್ಕಳು ಹಾಗು ಪುರುಷರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಯಶಸ್ವಿಗೊಳಿಸುವಂತೆ ಕೋರಿದರು.ಅಲ್ಲದೇ ಮಹಿಳೆಯರಿಗಾಗಿ ಈ ಬಾರಿ ದುರ್ಗಾಷ್ಠಮಿಯ ದಿನ ಪ್ರಸನ್ನ ಪಾರ್ವತಿ ಅಮ್ಮನವರ ಸನ್ನಿಯಲ್ಲಿ ನವದುರ್ಗಾ ಮಾತೆಯರ ಪ್ರತಿಷ್ಠಾಪನೆಯಲ್ಲಿ ಹಾರೋಹಳ್ಳಿ ತಾಲೂಕಿನ ಮಹಿಳಾ ಮಂಡಳಿಯವರಿಗಾಗಿ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಧರ್ಮದರ್ಶಿ ಸಮಿತಿ ಅಧ್ಯಕ್ಷ ಆದಿತ್ಯ ರಸರಂಜನ್,ದಸರಾ ಸಮಿತಿ ಸಂಚಾಲಕ ಹೆಚ್.ಎಸ್.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಹೋಟೆಲ್ ಜಗದೀಶ್, ಚಕ್ರಪಾಣಿ, ಸಾಂಸ್ಕೃತಿ ಸಮಿತಿ ಅಧ್ಯಕ್ಷೆ ಮಾಲತಿ ಶಿವನಾಗ್, ಮೊಹಮ್ಮದ್ ಯಾಕೂಬ್‌ಪಾಷ, ಸಹಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಶ್ರೀಕಂಠಯ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಪದ್ಮಮ್ಮ ಶ್ರೀನಿವಾಸ್ ಮೂರ್ತಿ, ಹೋಟೆಲ್ ಶಿವಲಿಂಗಯ್ಯ,ಶಿವಲಿAಗಮೂರ್ತಿ,ಎನ್.ರಮೇಶ್,
ಬನ್ನಿಪೂಜೆ ಸಮಿತಿಯ ವಿಶ್ವನಾಥ್‌ರಾಜ್, ಅರ್ಚಕರಾದ ರಾಮ ಮನೋಹರ್, ಜಗನ್ನಾಥ್,ಕುಲಕರ್ಣಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.