ಹಾರೋಹಳ್ಳಿ: ಶಿಥಿಲ ಶಾಲೆಗಳ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸರಣಿ ವರದಿಗಳ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ಅನುದಾನ ಬಿಡುಗಡೆಗೊಂಡಿದೆ.
ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ, ಟಿ ಹೊಸಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ತೋಕಸಂದ್ರ ಹಿರಿಯ ಪ್ರಾಥಮಿಕ ಶಾಲೆ ಕುರಿತು ‘ಶಿಥಿಲ ಶಾಲೆ ಸರಣಿ’ ವರದಿಗಳು ಪ್ರಕಟಗೊಂಡಿದ್ದವು. ತಾಲ್ಲೂಕಿನ 9 ಶಾಲೆಗಳ ದುರಸ್ತಿಗೆ ₹1.68ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.
ಶಾಸಕ ಇಕ್ಬಾಲ್ ಹುಸೇನ್, ತಾಲ್ಲೂಕಿನ ಕೆಲವು ಸರ್ಕಾರಿ ಶಾಲೆಗಳ ದುರಸ್ತಿ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ. ಸುಧಾರಣೆ ದೃಷ್ಟಿಯಿಂದ ಚಾವಣಿ, ಕಿಟಕಿ, ಬಾಗಿಲು, ನೆಲಕ್ಕೆ ಟೈಲ್ಸ್, ಸುಣ್ಣ ಬಳಿಯುವುದು ಹೀಗೆ ಹಲವು ದುರಸ್ತಿ ಕೆಲಸ ನಡೆಯಲಿದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜು, ಗ್ರಾಮೀಣಾಭಿವೃದ್ಧಿ ಇಲಾಖೆ ಚಂದ್ರಶೇಖರ್, ಮುಖಂಡರಾದ ನಾಗರಾಜು, ನಾಗೇಶ್, ಮೋಹನ್ ಹೊಳ್ಳ, ಶಿವಾನಂದ್, ಬೆಣಚುಕಲ್ ದೊಡ್ಡಿ ರುದ್ರೇಶ್,ಕಾಳಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.