ADVERTISEMENT

ಹಾರೋಹಳ್ಳಿ | ತಾಲ್ಲೂಕು ಕೇಂದ್ರದಲ್ಲಿ ಇಒಗೆ ಇಲ್ಲ ಕಚೇರಿ!

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:22 IST
Last Updated 8 ಫೆಬ್ರುವರಿ 2026, 3:22 IST
ಹಾರೋಹಳ್ಳಿ ತಾಲೂಕು ಕಚೇರಿ
ಹಾರೋಹಳ್ಳಿ ತಾಲೂಕು ಕಚೇರಿ   

ಹಾರೋಹಳ್ಳಿ: ಹೊಸ ತಾಲ್ಲೂಕು ಕೇಂದ್ರವಾಗಿ ಹಾರೋಹಳ್ಳಿ ಎರಡು ವರ್ಷ ಕಳೆದರೂ ಇನ್ನೂ ತಾಲ್ಲೂಕು ಕಚೇರಿ ನಿರ್ಮಾಣವಾಗದ ಕಾರಣ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ಮಾಡಬೇಕು ಎಂದರೆ ಸಾರ್ವಜನಿಕರು ತಾಲ್ಲೂಕು ಕೇಂದ್ರದಿಂದ ಐದಾರು ಕಿಲೋಮೀಟರ್ ದೂರ ಸಂಚರಿಸಬೇಕು.  

ಪುರಸಭೆಯ ಕಟ್ಟಡದಲ್ಲಿಯೇ ಎಲ್ಲ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದರೂ, ಕಾರ್ಯನಿರ್ವಾಹಕ ಅಧಿಕಾರಿ ಮಾತ್ರ ಪಟ್ಟಣದ ಹೊರಗಡೆಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಗ್ಗಲ್ಲಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಹಾರೊಹಳ್ಳಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಇದೆ. ಇದು ಪಟ್ಟಣದಿಂದ 4-5 ಕಿಲೋ ಮೀಟರ್ ದೂರದಲ್ಲಿದೆ.

ADVERTISEMENT

ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನಿಯೋಜಿಸಿ ಆರು ತಿಂಗಳು ಕಳೆದರೂ ಇದುವರೆಗೂ ಸಾರ್ವಜನಿಕರಿಗೆ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎಲ್ಲಿದೆ ಎಂಬ ಮಾಹಿತಿ ಇಲ್ಲ.

ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತಿಳಿಯಲು ತಾಲ್ಲೂಕು ಕಾರ್ಯನಿರ್ವಹಣಾ ಅಧಿಕಾರಿ ಇದುವರೆಗೆ ಆಗಿಲ್ಲ. ಏಕೆಂದರೆ ಕಚೇರಿ ಎಲ್ಲಿದೆ ಎಂಬುದು ಬಹಳಷ್ಟು ಸಾರ್ವಜನಿಕರಿಗೆ ತಿಳಿದಿಲ್ಲ. ಸಮಸ್ಯೆಗಳ ಯಾರಿಗೆ ಹೇಳುವುದು ಎಂಬ ಗೊಂದಲ ಸಾರ್ವಜನಿಕರಲ್ಲಿದೆ.

ನಾಮ ಫಲಕವಿಲ್ಲ: ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಕಗ್ಗಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಕಟ್ಟಡದಲ್ಲಿ ಇದೆ ಎಂದು ತಿಳಿದುಕೊಳ್ಳಲು ಬೋರ್ಡ್‌ ಹಾಗೂ ನಾಮಫಲಕ ಇಲ್ಲ.  

ಹಾರೋಹಳ್ಳಿ ತಾಲ್ಲೂಕಿನ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಯ ಕಟ್ಟಡದಲ್ಲಿ ಕಾರ್ಯಾಲಯ ನೀಡಿದ್ದು, ಅಲ್ಲಿಂದಲ್ಲೇ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಸಾರ್ವಜನಿಕರು ಇಲ್ಲಿಗೆ ಬಂದು ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ.
ಅಪೂರ್ವ, ಕಾರ್ಯನಿರ್ವಾಹಕ ಅಧಿಕಾರಿ, ಹಾರೋಹಳ್ಳಿ ತಾಲ್ಲೂಕು
ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಮಾಹಿತಿಗಳ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತರಲು 5-6 ಕಿಲೋ ಮೀಟರ್ ಹೋಗಬೇಕು. ಪಟ್ಟಣದ ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಕ ಅಧಿಕಾರಿ ಕಚೇರಿ ಇದ್ದರೆ ಸಾರ್ವಜನಿಕರಿಗೆ ಅನುಕೂಲ
ನಾಗರಾಜು ಚೀಲೂರು ಗ್ರಾಮ ಪಂಚಾಯಿತಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.