
ಚನ್ನಪಟ್ಟಣ: ಬೆಂಗಳೂರು ತೋಟದ ಬೆಳಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್) ಆಡಳಿತ ಮಂಡಳಿ 2025-30ನೇ ಅವಧಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು ಎರಡು ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಒಂದು ಸ್ಥಾನದಲ್ಲಿ ಜಯಗಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಇಬ್ಬರು ಮತ್ತು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಸಾಮಾನ್ಯ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಮಳೂರು ಪಟ್ಟಣ ರವಿ ಹಾಗೂ ಕಾಂಗ್ರೆಸ್‌ನ ಪ್ರದೀಪ್ ಕುಮಾರ್ ವಿಜೇತರಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಪಿ.ಬೈರಯ್ಯ ನಿರೀಕ್ಷೆಯಂತೆ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಚಿರಂಜೀವಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.
ಚನ್ನಪಟ್ಟಣದಲ್ಲೇ ಹೆಚ್ಚಿನ ಮತದಾರರು ಇರುವ ಕಾರಣ ಚುನಾವಣಾ ಪೈಪೋಟಿ ಕೇಂದ್ರೀಕೃತವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳೂ ಚನ್ನಪಟ್ಟಣ ತಾಲ್ಲೂಕಿನವರೇ ಆಗಿದ್ದಾರೆ.
ಮತಗಳ ವಿವರ: ಸಾಮಾನ್ಯ ಕ್ಷೇತ್ರ: ಜೆಡಿಎಸ್ ಬೆಂಬಲಿತ ಮಳೂರುಪಟ್ಟಣ ರವಿ 141 ಮತಗಳಿಸಿದರೆ, ಕಾಂಗ್ರೆಸ್‌ನ ಪ್ರದೀಪ್ ಕುಮಾರ್ 126 ಮತಗಳೊಂದಿಗೆ ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಮತ್ತೊಬ್ಬ ಅಭ್ಯರ್ಥಿ ಕೋಡಂಬಹಳ್ಳಿ ಶಿವಮಾದು 115 ಮತಗಳಿಸಿ ಸೋಲು ಕಂಡರು.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ: ಕಾಂಗ್ರೆಸ್‌ನ ಬಿ.ಪಿ. ಬೈರಯ್ಯ 140 ಮತಗಳೊಂದಿಗೆ ಆಯ್ಕೆಯಾದರು.
ಜಿಲ್ಲೆಯಲ್ಲಿ ಒಟ್ಟು 238 ಮತದಾರರಿದ್ದು, ಬೆಂಗಳೂರಿನ ಲಾಲ್‌ಬಾಗ್‌ನ ಮೈಸೂರು ಉದ್ಯಾನವನ ಕಲಾಸಂಘದ (ಡಾ.ಎಂ.ಎಚ್.ಮರೀಗೌಡ ಭವನ)ಲ್ಲಿ ಮಂಗಳವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆದು, ತಕ್ಷಣವೇ ಮತ ಎಣಿಕೆ ಕಾರ್ಯ ನಡೆಸಿ ಫಲಿತಾಂಶ ಘೋಷಿಸಲಾಯಿತು.
ಕಳೆದ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರೇ ನಿರ್ದೇಶಕರಾಗಿದ್ದು, ಈ ಬಾರಿಯೂ ಮೂರೂ ಸ್ಥಾನಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ, ಒಂದು ಸ್ಥಾನ ಜೆಡಿಎಸ್ ಪಾಲಾಗಿದ್ದು, ಉಳಿದೆರಡರಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ.
ಚನ್ನಪಟ್ಟಣ: ಹಾಪ್‌ಕಾಮ್ಸ್ ಆಡಳಿತ ಮಂಡಳಿ ಚುನಾವಣೆ: ಕಾಂಗ್ರೆಸ್‌ಗೆ 2, ಜೆಡಿಎಸ್‌ಗೆ 1 ಸ್ಥಾನ
ಬೆಂಗಳೂರು ತೋಟದ ಬೆಳಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್) ಆಡಳಿತ ಮಂಡಳಿಯ 2025-30ನೇ ಅವಧಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು ಎರಡು ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಒಂದು ಸ್ಥಾನದಲ್ಲಿ ಜಯಗಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಇಬ್ಬರು ಮತ್ತು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಸಾಮಾನ್ಯ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಮಳೂರುಪಟ್ಟಣ ರವಿ ಹಾಗೂ ಕಾಂಗ್ರೆಸ್‌ನ ಪ್ರದೀಪ್ ಕುಮಾರ್ ವಿಜೇತರಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಪಿ. ಬೈರಯ್ಯ ಅವರು ನಿರೀಕ್ಷೆಯಂತೆ ಆಯ್ಕೆಯಾಗಿದ್ದಾರೆ. ಬೈರಯ್ಯ ವಿರುದ್ಧ ಸ್ಪರ್ಧಿಸಿದ್ದ ಚಿರಂಜೀವಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.
ಚನ್ನಪಟ್ಟಣದಲ್ಲೇ ಹೆಚ್ಚಿನ ಮತದಾರರು ಇರುವ ಕಾರಣ ಚುನಾವಣಾ ಪೈಪೋಟಿ ಕೇಂದ್ರೀಕೃತವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳೂ ಚನ್ನಪಟ್ಟಣ ತಾಲ್ಲೂಕಿನವರೇ ಆಗಿದ್ದಾರೆ.
ಮತಗಳ ವಿವರ:
ಸಾಮಾನ್ಯ ಕ್ಷೇತ್ರ: ಜೆಡಿಎಸ್ ಬೆಂಬಲಿತ ಮಳೂರುಪಟ್ಟಣ ರವಿ 141 ಮತಗಳಿಸಿದರೆ, ಕಾಂಗ್ರೆಸ್‌ನ ಪ್ರದೀಪ್ ಕುಮಾರ್ 126 ಮತಗಳೊಂದಿಗೆ ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಮತ್ತೊಬ್ಬ ಅಭ್ಯರ್ಥಿ ಕೋಡಂಬಹಳ್ಳಿ ಶಿವಮಾದು 115 ಮತಗಳಿಸಿ ಸೋಲು ಕಂಡರು.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ: ಕಾಂಗ್ರೆಸ್‌ನ ಬಿ.ಪಿ. ಬೈರಯ್ಯ 140 ಮತಗಳೊಂದಿಗೆ ಆಯ್ಕೆಯಾದರು.
ಜಿಲ್ಲೆಯಲ್ಲಿ ಒಟ್ಟು 238 ಮತದಾರರಿದ್ದು, ಬೆಂಗಳೂರಿನ ಲಾಲ್‌ಬಾಗ್‌ನ ಮೈಸೂರು ಉದ್ಯಾನವನ ಕಲಾಸಂಘದ (ಡಾ.ಎಂ.ಎಚ್. ಮರೀಗೌಡ ಭವನ)ಲ್ಲಿ ಮಂಗಳವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆದು, ತಕ್ಷಣವೇ ಮತ ಎಣಿಕೆ ಕಾರ್ಯ ನಡೆಸಿ ಫಲಿತಾಂಶ ಘೋಷಿಸಲಾಯಿತು.
ಕಳೆದ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರೇ ನಿರ್ದೇಶಕರಾಗಿದ್ದು, ಈ ಬಾರಿಯೂ ಮೂರೂ ಸ್ಥಾನಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಒಂದು ಸ್ಥಾನ ಜೆಡಿಎಸ್ ಪಾಲಾಗಿದ್ದು, ಉಳಿದೆರಡರಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ.
ಪ್ರಜಾವಾಣಿ ವಾರ್ತೆ
ಚನ್ನಪಟ್ಟಣ: ಬೆಂಗಳೂರು ತೋಟದ ಬೆಳಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್ ಕಾಮ್ಸ್) ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು, ಒಂದು ಸ್ಥಾನದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯ ಸಾಧಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಇಬ್ಬರು, ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರದಿಂದ ಒಬ್ಬರು ಆಯ್ಕೆಯಾಗಬೇಕಿತ್ತು. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಮಳೂರುಪಟ್ಟಣ ರವಿ, ಕಾಂಗ್ರೆಸ್ ಬೆಂಬಲಿತ ಪ್ರದೀಪ್ ಕುಮಾರ್ ಆಯ್ಕೆಯಾಗಿದ್ದಾರೆ. ಹಾಗೆಯೆ ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಬಿ.ಪಿ. ಬೈರಯ್ಯ ಅವರು ನಿರೀಕ್ಷೆಯಂತೆ ಆಯ್ಕೆಯಾಗಿದ್ದಾರೆ. ಬೈರಯ್ಯ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿ ಚಿರಂಜೀವಿ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದರು.
ಜಿಲ್ಲೆಯಲ್ಲಿ ಒಟ್ಟು 238 ಹಾಪ್ ಕಾಮ್ಸ್ ಮತದಾರರು ಇದ್ದಾರೆ. ಜೆಡಿಎಸ್ ಬೆಂಬಲಿತ ಮಳೂರುಪಟ್ಟಣ ರವಿ 141 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಪ್ರದೀಪ್ ಕುಮಾರ್ 126 ಮತ ಪಡೆದು ಜಯಗಳಿಸಿದರು. ಮತ್ತೊಬ್ಬ ಕಾಂಗ್ರೆಸ್ ಬೆಂಬಲಿತ ಕೋಡಂಬಹಳ್ಳಿ ಶಿವಮಾದು 115 ಮತಗಳನ್ನು ಪಡೆದು ಪರಾಭವಗೊಂಡರು. ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಬಿ.ಪಿ. ಬೈರಯ್ಯ 140 ಮತಗಳನ್ನು ಪಡೆದು ಜಯ ಸಾಧಿಸಿದರು.
ಚುನಾವಣಾ ಕಣದಲ್ಲಿ ಇದ್ದ ಎಲ್ಲರೂ ಚನ್ನಪಟ್ಟಣದವರೆ ಆಗಿದ್ದರು. ತಾಲ್ಲೂಕಿನಲ್ಲಿ ಹಾಪ್ ಕಾಮ್ಸ್ ನ ಸಿಂಹಪಾಲು ಮತದಾರರು ಇದ್ದ ಕಾರಣ ಚನ್ನಪಟ್ಟಣದಲ್ಲಿ ಹಾಪ್ ಕಾಮ್ಸ್ ಚುನಾವಣಾ ಪೈಪೋಟಿ ಏರ್ಪಟ್ಟಿತ್ತು. ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರೇ ಹಾಪ್ ಕಾಮ್ಸ್ ನಿರ್ದೇಶಕರಾಗಿದ್ದ ಕಾರಣ ಈ ಅವಧಿಗೂ ತಮ್ಮ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಒತ್ತಡದಲ್ಲಿ ಕಾಂಗ್ರೆಸ್ ಇತ್ತು. ಆದರೆ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು, ಒಂದರಲ್ಲಿ ಜೆಡಿಎಸ್ ಬೆಂಬಲಿತರು ವಿಜಯಿಯಾಗಿದ್ದಾರೆ.
ಬೆಂಗಳೂರಿನ ಲಾಲ್ ಬಾಗ್ ನ ಮೈಸೂರು ಉದ್ಯಾನವನ ಕಲಾಸಂಘದಲ್ಲಿ (ಡಾ.ಎಂ.ಎಚ್. ಮರೀಗೌಡ ಭವನ) ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು. ನಂತರ ಮತ ಎಣಿಕೆ ನಡೆದು ಫಲಿತಾಂಶ ಘೋಷಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.