ADVERTISEMENT

ಜನತಾ ದಾಸೋಹಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 14:16 IST
Last Updated 1 ಏಪ್ರಿಲ್ 2020, 14:16 IST
ಚನ್ನಪಟ್ಟಣದಲ್ಲಿ ಎಚ್.ಡಿ.ಕೆ. ಜನತಾ ದಾಸೋಹಕ್ಕೆ ಜೆಡಿಎಸ್ ತಾಲ್ಲೂಕು ಘಟಕದ ವತಿಯಿಂದ ಚಾಲನೆ ನೀಡಲಾಯಿತು
ಚನ್ನಪಟ್ಟಣದಲ್ಲಿ ಎಚ್.ಡಿ.ಕೆ. ಜನತಾ ದಾಸೋಹಕ್ಕೆ ಜೆಡಿಎಸ್ ತಾಲ್ಲೂಕು ಘಟಕದ ವತಿಯಿಂದ ಚಾಲನೆ ನೀಡಲಾಯಿತು   

ಚನ್ನಪಟ್ಟಣ: ಬಡವರು, ವಲಸೆ ಕಾರ್ಮಿಕರು, ನಿರ್ಗತಿಕರು, ದುರ್ಬಲರಿಗೆ ಲಾಕ್‌ಡೌನ್ ಅವಧಿ ಮುಗಿಯುವವರೆಗೂ ನಿತ್ಯ ಆಹಾರ ಪೂರೈಸುವ ‘ಎಚ್.ಡಿ.ಕೆ. ಜನತಾ ದಾಸೋಹ’ಕ್ಕೆ ಜೆಡಿಎಸ್ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಚಾಲನೆ ನೀಡಲಾಯಿತು.

ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಲಾಕ್‌ಡೌನ್ ಮುಗಿಯುವರೆಗೂ ದಾಸೋಹ ನಡೆಯಲಿದೆ. ಕ್ಷೇತ್ರದಲ್ಲಿರುವ ಯಾವುದೇ ಮಂದಿ ಊಟವಿಲ್ಲದೆ ಬಳಲಬಾರದು. ಅಂತವರನ್ನು ಗುರುತಿಸಿ ಆಹಾರ ನೀಡಲಾಗುತ್ತಿದೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ತಿಳಿಸಿದರು.

ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಮೂರು ಅವಧಿಯಲ್ಲಿಯೂ ಊಟ ನೀಡಲಾಗುತ್ತದೆ. ವಲಸಿಗ ಕಾರ್ಮಿಕರು, ನಿರ್ಗತಿಕರು ಇರುವ ಸ್ಥಳಗಳಿಗೆ ತೆರಳಿ ಆಹಾರ ಪೂರೈಸಲಾಗುತ್ತಿದೆ ಎಂದರು.

ADVERTISEMENT

ಪಟ್ಟಣದ ಮಹದೇಶ್ವರ ನಗರ, ತಮಿಳು ಕಾಲೊನಿ, ಮಂಗಳವಾರಪೇಟೆ, ಸಾತನೂರು ಸರ್ಕಲ್, ಷೇರು ಹೋಟೆಲ್ ಸೇರಿದಂತೆ ಹಲವು ಬಡಾವಣೆಗಳಿಗೆ ತೆರಳಿ ಕಾರ್ಯಕರ್ತರು ಆಹಾರ ವಿತರಿಸಿದರು.

ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಎಂ.ಸಿ. ಕರಿಯಪ್ಪ, ಹಾಪ್ ಕಾಮ್ಸ್ ದೇವರಾಜು, ಕುಕ್ಕೂರುದೊಡ್ಡಿ ಜಯರಾಮ್, ರಂಗಸ್ವಾಮಿ, ನಗರಸಭಾ ಸದಸ್ಯರಾದ ಜಬೀವುಲ್ಲಾ ಖಾನ್, ಹಮೀದ್ ಮುನಾವರ್, ಮಧು, ಶಶಿಕುಮಾರ್, ಉಮಾಶಂಕರ್, ಲೋಕೇಶ್, ಮುಖಂಡರಾದ ಮಳೂರುಪಟ್ಟಣ ರವಿ, ಎಂ.ಜಿ.ಕೆ. ಪ್ರಕಾಶ್, ರಘು ಕುಮಾರ್, ಸಂದೀಪ್, ಕೆಂಚೇಗೌಡ, ಶ್ರೀಕಂಠು, ಮಧು ಹಾಜರಿದ್ದರು.ಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.