ಕನಕಪುರ ಮರಳೆ ಬೇಕುಪ್ಪೆ ಗ್ರಾಮದಲ್ಲಿರುವ ಎಂ.ಡಿ.ವಿಜಯದೇವು ಅವರ ಒಡೆತನದ ತಪ್ಪಲು ರೆಸಾರ್ಟ್
ಕನಕಪುರ: ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲು ಕಾಂಗ್ರೆಸ್ ಪಕ್ಷವು ಹಣ ಸಂಗ್ರಹಣೆ ಮಾಡಿದೆ ಎಂಬ ಮಾಹಿತಿ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳ ತಂಡವು, ಉಪ ಮುಖ್ಯಮಂತ್ರಿ ಆಪ್ತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ. ವಿಜಯದೇವು ಅವರ ತಪ್ಪಲು ರೆಸಾರ್ಟ್ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದೆ.
ಎರಡು ಕಾರುಗಳಲ್ಲಿ ಬಂದ ಐ.ಟಿ ಅಧಿಕಾರಿಗಳ ತಂಡವು ವಿಜಯದೇವು ಅವರ ಕನಕಪುರ ನಗರದಲ್ಲಿರುವ ಮನೆ ಹಾಗೂ ತಾಲ್ಲೂಕಿನ ಮರಳೆಬೇಕುಪ್ಪೆ ಗ್ರಾಮದಲ್ಲಿರುವ ‘ತಪ್ಪಲು’ ರೆಸಾರ್ಟ್ ಮೇಲೆ ದಾಳಿ ನಡೆಸಿ ತಡರಾತ್ರಿವರೆಗೂ ಪರಿಶೀಲನೆ ನಡೆಸಿತು.
ಡಿ.ಕೆ.ಶಿವಕುಮಾರ್ ಆಪ್ತರಾದ ಬಮೂಲ್ ಅಧ್ಯಕ್ಷ ರಾಜಕುಮಾರ್, ಡಿಕೆಎಸ್ ಟ್ರಸ್ಟ್ ಅಧ್ಯಕ್ಷ ಚಿಕ್ಕೊಂಡಳ್ಳಿ ವಿಶ್ವನಾಥ್ ಹಾಗೂ ಕೊಳಗೊಂಡನಹಳ್ಳಿ ಶೆಟ್ಟರ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆಯಲ್ಲಿ ಹಣ ದೊರೆತಿದೆ ಎಂದು ಸಾರ್ವಜನಿಕವಾಗಿ ತಿಳಿದು ಬಂದಿದೆ.