
ಪ್ರಜಾವಾಣಿ ವಾರ್ತೆ
ಬಂಧನ
ಕನಕಪುರ: ಇಲ್ಲಿನ ಮಳಗಾಳು ಗ್ರಾಮದ ಬೀದಿ ಬದಿ ಪಾನಿಪುರಿ ವ್ಯಾಪಾರಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿಯನ್ನು ಕನಕಪುರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಳಗಾಳು ಗ್ರಾಮದ ಸಂತೋಷ್ ಬಂಧಿತ ಆರೋಪಿ. ಸೋಮವಾರ ಸಂಜೆ ಚಾಮುಂಡೇಶ್ವರಿ ರೈಸ್ ಮಿಲ್ ಮುಂಭಾಗದ ಪಾನಿಪುರಿ ವ್ಯಾಪಾರಿ ಕುಮಾರಸ್ವಾಮಿಗೆ ಚಾಕು ಇರಿದು ಪರಾರಿಯಾಗಿದ್ದ.
ಪುರ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರತ್ನಮ್ಮ ಮತ್ತು ಸಿಬ್ಬಂದಿ ಮಳೆಗಾಳು ಗ್ರಾಮದಲ್ಲಿ ಸೋಮವಾರ ರಾತ್ರಿ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.