ADVERTISEMENT

ಕನಕಪುರ | ನಾಳೆ ಹಿಂದೂ ಸಮಾಜೋತ್ಸವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:21 IST
Last Updated 8 ಫೆಬ್ರುವರಿ 2026, 3:21 IST
ಕನಕಪುರ ನಗರದ ಕೋಟೆ ಗಣಪತಿ ದೇವಾಲಯದಲ್ಲಿ ಹಿಂದೂ ಸಮಾಜೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಬಿ.ನಾಗರಾಜು ಮಾತನಾಡಿದರು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು
ಕನಕಪುರ ನಗರದ ಕೋಟೆ ಗಣಪತಿ ದೇವಾಲಯದಲ್ಲಿ ಹಿಂದೂ ಸಮಾಜೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಬಿ.ನಾಗರಾಜು ಮಾತನಾಡಿದರು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು   

ಕನಕಪುರ: ಹಿಂದೂ ಸಮಾಜದ ಏಕತೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಗಾಗಿ ಫೆ.9ರಂದು ತಾಲ್ಲೂಕು ಕ್ರೀಡಾಂಗಣದಲ್ಲಿ ಹಿಂದೂ ಸಮಾಜೋತ್ಸವ ಏರ್ಪಡಿಸಲಾಗಿದೆ ಎಂದು ಆಚರಣೆ ಸಮಿತಿ ಅಧ್ಯಕ್ಷ ಬಿ.ನಾಗರಾಜು ಈ ಮಾಹಿತಿ ನೀಡಿದರು.

ಕೋಟೆ ಗಣೇಶ ದೇವಸ್ಥಾನದಲ್ಲಿ ನಡೆದ ಪೂರ್ವತಯಾರಿ ಸಭೆಯಲ್ಲಿ ಮಾತನಾಡಿ, ಈ ಕಾರ್ಯಕ್ರಮವನ್ನು ಹೋಬಳಿ ಮಟ್ಟದ ನಂತರ ಈಗ ತಾಲ್ಲೂಕು ಮಟ್ಟದಲ್ಲಿ ಏರ್ಪಡಿಸಲಾಗುತ್ತಿದೆ ಎಂದರು.

ಆಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಹೋಟೆಲ್ ನಾಗರಾಜ್, ದೇಶದ ಸಂಸ್ಕೃತಿ ಮತ್ತು ಸಂಪ್ರದಾಯ ಸಂರಕ್ಷಣೆಯಲ್ಲಿ ಹಿಂದೂ ಧರ್ಮದ ಪಾತ್ರದ ಬಗ್ಗೆ ಮಾತನಾಡಿದರು.

ADVERTISEMENT

ಸೋಮವಾರ ಸಂಜೆ 3ಕ್ಕೆ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಶೋಭಾಯಾತ್ರೆ ಪ್ರಾರಂಭವಾಗಿ, ಎಂ.ಜಿ.ರಸ್ತೆ ಮತ್ತು ಕೆಂಗಲ್ ಹನುಮಂತಯ್ಯ ವೃತ್ತದ ಮೂಲಕ ತಾಲ್ಲೂಕು ಕ್ರೀಡಾಂಗಣ ತಲುಪಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶಂಕರ್ ಶಾನುಭಾಗ್ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸಮಿತಿ ಉಪಾಧ್ಯಕ್ಷ ಚಿನ್ನಸ್ವಾಮಿ, ಖಜಾಂಚಿ ವೆಂಕಟೇಶ್, ಸಮಿತಿ ಪದಾಧಿಕಾರಿಗಳಾದ ಸ್ಟುಡಿಯೋ ಚಂದ್ರು, ಕೆ.ವಿ.ಆನಂದ್, ಡಿ.ಶ್ರೀನಿವಾಸ್, ವಿನಯ್, ಕೆ.ಎಂ.ಮಂಜುನಾಥ್, ಭಗತ್ ರಾಮ್, ವಕೀಲ ನಂಜೇಗೌಡ, ಪರಮೇಶ್, ಬಸವರಾಜು, ಆನಂದ, ಆಟೋ ಕುಮಾರ್ ಸೇರಿದಂತೆ ಹಿಂದೂ ಸಮಾಜೋತ್ಸವ ಸಮಿತಿ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.