ADVERTISEMENT

ಕನಕಪುರ | ಮನೆ ಕಳ್ಳತನ ಪ್ರಕರಣ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:44 IST
Last Updated 2 ಆಗಸ್ಟ್ 2025, 4:44 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇವಿನಮರದೊಡ್ಡಿಯಲ್ಲಿ ಜೂನ್ 21 ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಕೋಡಿಹಳ್ಳಿ ಪೊಲೀಸರು ಬೇಧಿಸಿ ಆರೋಪಿಯನ್ನು ಬಂಧಿಸಿ ಅತನಿಂದ ₹2.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ADVERTISEMENT

ಬೇವಿನಮರದೊಡ್ಡಿ ಗ್ರಾಮದ ಅರುಣ್ (25) ಬಂಧಿತ ಆರೋಪಿ. ಬೇವಿನಮರದೊಡ್ಡಿ ಗ್ರಾಮದ ವೀಣಾ ಲೋಕೇಶ್ ಅವರ ಮನೆಯಲ್ಲಿ ಒಂದು ತಿಂಗಳ ಹಿಂದೆ ಕಳ್ಳತನವಾಗಿತ್ತು. ಜಮೀನಿನಲ್ಲಿದ್ದ ಜಾನುವಾರುಗಳನ್ನು ಮನೆಗೆ ಕರೆತರಲು ಹೋದಾಗ ಕಳವಾಗಿತ್ತು. ಈ ಬಗ್ಗೆ ಕೋಡಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರನ್ನು ದಾಖಲಿಸಿಕೊಂಡಿದ್ದ ಪೊಲೀಸರು ಅನುಮಾನದಿಂದ ಓಡಾಡುತ್ತಿದ್ದ ಅರುಣ್‌ನನ್ನು ಜುಲೈ 24ರಂದು ವಶಕ್ಕೆ ಪಡೆದು ವಿಚರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಪೊಲೀಸರು ಆರೋಪಿಯಿಂದ ₹2.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾನ್‌ಸ್ಟೆಬಲ್ ಧನಂಜಯ, ಕೈಲಾಸ್, ಗಿರೀಶ್, ಅರುಣ್ ಕುಮಾರ್ ಮತ್ತು ಮಲ್ಲೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.