
ಪ್ರಜಾವಾಣಿ ವಾರ್ತೆಕಳ್ಳತನ
ಕನಕಪುರ: ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಶುಕ್ರವಾರ ರಾತ್ರಿ ರೂಮಿನ ಕಿಟಕಿಯ ಗಾಜು ಒಡೆದ ಕಳ್ಳರು ಗ್ರಾಹಕರ ಲ್ಯಾಪ್‌ಟಾಪ್ ಕಳ್ಳತನ ಮಾಡಲಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ ಅನನ್ಯ ಎಂಬುವರ ಲ್ಯಾಪ್‌ಟಾಪ್ ಕಳ್ಳತನವಾಗಿದೆ. ಅದರ ಮೌಲ್ಯ ₹50 ಸಾವಿರ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನ ಬಾಸ್ ಆಟೋಮೆಟಿಕ್ ಎಲೆಕ್ಟ್ರಾನಿಕ್ ಕಂಪನಿಯ 15 ಉದ್ಯೋಗಿಗಳು ಶುಕ್ರವಾರ ರಾತ್ರಿ ಕನಕಪುರದ ಹೊರ ವಲಯದ ರೆಸಾರ್ಟ್‌ಗೆ ಬಂದು ತಂಗಿದ್ದರು. ರಾತ್ರಿ ಕಿಟಕಿಯ ಗಾಜು ಒಡೆದು ಲ್ಯಾಪ್‌ಟಾಪ್ ಕಳ್ಳತನ ಮಾಡಲಾಗಿದೆ.
ಲ್ಯಾಪ್ ಟಾಪ್ ಕಳೆದುಕೊಂಡ ಅನನ್ಯ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.