
4ನೇ ‘ಕರ್ನಾಟಕ ಮಿನಿ ಕ್ರೀಡಾಕೂಟ–2025’ರಲ್ಲಿ ಟೇಕ್ವಾಂಡೊದಲ್ಲಿ ವಿವಿಧ ಪದಕ ಜಯಿಸಿದ ಬೆಂಗಳೂರು ದಕ್ಷಿಣ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯು ಕ್ರೀಡಾಪಟುಗಳಿಗೆ ಗೃಹ ಸಚಿವ ಜಿ. ಪರಮೇಶ್ವರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಪದಕ ಪ್ರದಾನ ಮಾಡಿದರು.
ರಾಮನಗರ: ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ನಡೆದ 4ನೇ ‘ಕರ್ನಾಟಕ ಮಿನಿ ಕ್ರೀಡಾಕೂಟ–2025’ರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯು 11 ಕ್ರೀಡಾಪಟುಗಳು ವಿವಿಧ ವಿಭಾಗದಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸುವ ಮೂಲಕ 2ನೇ ಸ್ಥಾನ ಪಡೆದಿದೆ.
ಕ್ರೀಡಾಕೂಟದಲ್ಲಿ ಬೆಂಗಳೂರು 242 ಅಂಕಗಳೊಂದಿಗೆ ಪ್ರಥಮ ಸ್ಥಾನ, ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರಕ್ಕೆ) 116 ಅಂಕದೊಂದಿಗೆ ದ್ವಿತೀಯ ಸ್ಥಾನ ಹಾಗೂ 93 ಅಂಕಗಳೊಂದಿಗೆ ಬಳ್ಳಾರಿ ತೃತೀಯ ಸ್ಥಾನ ಪಡೆದಿದೆ.
ಎರಡನೇ ಸ್ಥಾನ ಪಡೆದ ಸಂಸ್ಥೆಯ 11 ಕ್ರೀಡಾಪಟುಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಅವರು ಪದಕ ಮತ್ತು ಪ್ರಮಾಣಪತ್ರ ವಿತರಿಸಿದರು.
ಪದಕ ವಿಜೇತರು: ಚಿನ್ನದ ಪದಕ– ವಾರುನೀ ಜಿ. (20 ಕೆ.ಜಿ ವಿಭಾಗ), ನಯನ ಪ್ರಿಯ (30 ಕೆ.ಜಿ ವಿಭಾಗ), ಪೂರ್ವಿಕ ಎಂ. (53 ಕೆ.ಜಿ ವಿಭಾಗ). ಬೆಳ್ಳಿ ಪದಕ– ಮಲ್ಲೇಶ್ ಆರ್. (21 ಕೆ.ಜಿ ವಿಭಾಗ), ಇಶಾನ್ ಜಿ. (24 ಕೆ.ಜಿ ವಿಭಾಗ), ಧ್ರುವ್ ಕುಮಾರ್ (27 ಕೆ.ಜಿ ವಿಭಾಗ), ವಂಶಿ ವಿ. (38 ಕೆ.ಜಿ ವಿಭಾಗ), ವಿನುತಾ ಎಸ್. (43 ಕೆ.ಜಿ ವಿಭಾಗ). ಕಂಚಿನ ಪದಕ– ದೀಪ್ತಿ ಎನ್. (26 ಕೆ.ಜಿ ವಿಭಾಗ), ಸಾಗರ್ ಸಿ.ಎ (49 ಕೆ.ಜಿ ವಿಭಾಗ), ಹರ್ಮೈನ್ ಫಾತಿಮಾ (48 ಕೆ.ಜಿ ವಿಭಾಗ).
ಟೇಕ್ವಾಂಡೊ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಸತೀಶ್ ಎಂ., ಪ್ರಧಾನ ಕಾರ್ಯದರ್ಶಿ ಗೋವಿಂದ್ ಎಂ. ಹಾಗೂ ಇತರರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.