ADVERTISEMENT

ಜಾತಿ ಸಮೀಕ್ಷೆ ಪ್ರಚಾರಕ್ಕೆ ಸೀಮಿತ: ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 8:25 IST
Last Updated 26 ಸೆಪ್ಟೆಂಬರ್ 2021, 8:25 IST
ಪತ್ರಿಕಾಗೋಷ್ಠಿಯೊಂದರಲ್ಲಿ ಸಿದ್ದರಾಮಯ್ಯ ಮತ್ತು ಎಚ್‌.ಡಿ ಕುಮಾರಸ್ವಾಮಿ
ಪತ್ರಿಕಾಗೋಷ್ಠಿಯೊಂದರಲ್ಲಿ ಸಿದ್ದರಾಮಯ್ಯ ಮತ್ತು ಎಚ್‌.ಡಿ ಕುಮಾರಸ್ವಾಮಿ    

ರಾಮನಗರ: ‘ಜಾತಿ ಸಮೀಕ್ಷೆ ಬಗ್ಗೆ ಸದನದಲ್ಲಿ ಮಾತನಾಡುವುದನ್ನು ಬಿಟ್ಟು‌ ಬೀದಿಯಲ್ಲಿ ಮಾತನಾಡುವುದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ’ ಎಂದುಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಬಿಡದಿಯ ತೋಟದ ಮನೆಯಲ್ಲಿ ಭಾನುವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ಹತ್ತು ದಿನಗಳ ಕಾಲ ಸದನ ನಡೆದಿತ್ತು. ಸದನದಲ್ಲಿ ನಿಯಮ 69ರಲ್ಲಿ ಈ ವಿಚಾರವನ್ನು ಚರ್ಚೆಗೆ ತರಬಹುದಿತ್ತು. ಈ ಮೂಲಕ ರಾಜ್ಯದ ಜನತೆ ಮುಂದೆ ಸತ್ಯ ತೆರೆದಿಡಬಹುದಿತ್ತು. ಆದರೆ, ಅವರಿಗೆ ಅದರ ಅವಶ್ಯಕತೆ ಇಲ್ಲ‌. ಜಾತಿ ಸಮೀಕ್ಷೆ ಕೇವಲ‌ ಪ್ರಚಾರಕ್ಕೆ ಬೇಕಿದೆ ಎಂದರು.

ಸೋಮವಾರದ ಭಾರತ ಬಂದ್ ಕರೆ ಬೆಂಬಲಿಸಿದ ಅವರು ‘ರೈತರ ಹಿತದೃಷ್ಟಿಯಿಂದ ನಡೆಯುವ ಯಾವುದೇ ಹೋರಾಟಗಳಿಗೆ ನನ್ನ ಬೆಂಬಲ ಇದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.