Abhinandana book release
ರಾಮನಗರ: ನಗರದ ಎಚ್.ವಿ. ಹನುಮಂತು ಕಲಾಬಳಗ ಹಾಗೂ ಅಂಕನಹಳ್ಳಿ ಪ್ರಕಾಶನವು ಗಾಯಕ ಕೆಂಗಲ್ ವಿನಯ್‍ಕುಮಾರ್ ಅವರ ಗಾಯನ ಜೀವನ ಕುರಿತು ಆ. 24ರಂದು ವಿವೇಕಾನಂದನಗರದಲ್ಲಿರುವ ಎಂ.ಎಚ್. ಕಾಲೇಜು ಸಭಾಂಗಣದಲ್ಲಿ ‘ಕೆಂಗಲ್ಲ ಕೊರಳು’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದೆ.
ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ವಹಿಸುವರು. ಕೃತಿ ಕುರಿತು ಭಾರತೀಯ ಸಂಸ್ಕತಿ ವಿದ್ಯಾಪೀಠದ ಪ್ರಾಂಶುಪಾಲ ಜಿ. ಶಿವಣ್ಣ ಮಾತನಾಡುವರು. ವಿನಯ್ ಕುಮಾರ್ ಅವರನ್ನು ಕುರಿತು ಎಚ್.ವಿ. ಹನುಮತು, ತಿಮ್ಮರಾಜು, ದೇವರಾಜ ಕೆ. ಮಲಾರ ಹಾಗೂ ಎಂ.ಎಸ್. ಜೈಪ್ರಕಾಶ್ ತಮ್ಮ ಅನಿಸಿಕೆ ವ್ಯಕ್ತಪಡಿಸುವರು.
ಇದೇ ಸಂದರ್ಭದಲ್ಲಿ ಸಾಂಸ್ಕತಿಕ ಸಂಘಟಕರಾದ ರಾ.ಬಿ. ನಾಗರಾಜು ಹಾಗೂ ವಾಣಿಜ್ಯ ತೆರಿಗೆ ಇಲಾಖೆಯಲಿ ಬೆರಳಚ್ಚುಗಾರ ಎಚ್. ನಾಗರಾಜ್ ಅವರಿಗೆ ಸನ್ಮಾನ ಜರುಗಲಿದೆ. ಗಾಯಕರಾದ ಬಿ.ಆರ್. ಗೋಪಾಲಯ್ಯ, ಸೌಜನ್ಯ ಕೃಷ್ಣಮೂರ್ತಿ, ದೇವರಾಜು ಕೆ. ಮಲಾರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಆರೋಗ್ಯ ಇಲಾಖೆಯ ನೌಕರರರಾಗಿರುವ ಕೆಂಗಲ್ ವಿನಯ್‌ಕುಮಾರ್ ಅವರು, ಸುಮಾರು 4 ದಶಕಗಳಿಂದ ಗಾಯನದಲ್ಲಿ ತೊಡಗಿಕೊಂಡಿದ್ದು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಪರಿಚಿತರಾಗಿದ್ದಾರೆ. ಗಾಯಕರಾಗಿ ಜೀವನ, ಕ್ರಮಿಸಿದ ದಾರಿ ಹೀಗೆ ವಿವಿಧ ಆಯಾಮಗಳಲ್ಲಿ ಅವರ ಬದುಕನ್ನು ‘ಕೆಂಗಲ್ಲ ಕೊರಳು’ ಗ್ರಂಥದಲ್ಲಿ ದಾಖಲಿಸಲಾಗಿದೆ.
ಆರೋಗ್ಯ ಇಲಾಖೆಯಲ್ಲಿ ಆಯೋಜಿಸುವ ಜಾಗೃತಿ ಕಾರ್ಯಕ್ರಮಗಳಲ್ಲಿ ಜಾಗೃತಿ ಗೀತೆಗಳನ್ನು ರಚಿಸಿರುವ ವಿನಯ್ ಕುಮಾರ್, ಅವುಗಳಿಗೆ ರಾಗ ಸಂಯೋಜಿಸಿ ಹಾಡಿ ಗಮನ ಸೆಳೆದಿದ್ದಾರೆ. ಜಾನಪದ ಗೀತೆ, ಭಾವಗೀತೆ ಹಾಗೂ ಚಲನಚಿತ್ರಗಳನ್ನು ಸೊಗಸಾಗಿ ಹಾಡಬಲ್ಲ ಅವರು ಸೇವೆಯಿಂದ ಆಗಸ್ಟ್ ತಿಂಗಳಾಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಅವರಿಗೆ ‘ಗಾನ ಗಾರುಡಿಗ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.