ADVERTISEMENT

ಕೋಲಾಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 13:29 IST
Last Updated 16 ಜೂನ್ 2019, 13:29 IST
ಮೇನಾಗರ ಗ್ರಾಮದ ಶ್ರೀ ಆಂಜನೇಯಸ್ವಾಮಿ ಜಾನಪದ ಕಲಾ ಬಳಗದ ಪದಾಧಿಕಾರಿಗಳು ಭಾನುವಾರ ಕೋಲಾಟ ಪ್ರದರ್ಶಿಸಿದರು
ಮೇನಾಗರ ಗ್ರಾಮದ ಶ್ರೀ ಆಂಜನೇಯಸ್ವಾಮಿ ಜಾನಪದ ಕಲಾ ಬಳಗದ ಪದಾಧಿಕಾರಿಗಳು ಭಾನುವಾರ ಕೋಲಾಟ ಪ್ರದರ್ಶಿಸಿದರು   

ರಾಮನಗರ : ಇಲ್ಲಿನ ಜಾನಪದ ಲೋಕದಲ್ಲಿ ಪಾಂಡವಪುರ ತಾಲ್ಲೂಕಿನ ಮೇನಾಗರ ಗ್ರಾಮದ ಶ್ರೀ ಆಂಜನೇಯಸ್ವಾಮಿ ಜಾನಪದ ಕಲಾ ಬಳಗದ ವತಿಯಿಂದ ‘ಕೋಲಾಟ ಪ್ರದರ್ಶನ’ ನಡೆಯಿತು.

‘40 ವರ್ಷಗಳಿಂದ ಕೋಲಾಟ ಪ್ರದರ್ಶನ ನೀಡುತ್ತಿದ್ದೇನೆ. ನೂರಾರು ಜನರಿಗೆ ಕಲಿಸಿ ಕೊಟ್ಟಿದ್ದೇನೆ. ಈಗಲೂ ಕೋಲಾಟ ಪ್ರದರ್ಶನಕ್ಕೆ ಬೇಡಿಕೆ’ ಇದೆ ಎಂದು ಹಿರಿಯ ಕಲಾವಿದ ಶಿವಣ್ಣಗೌಡ ತಿಳಿಸಿದರು.

ಜನಪದ ಕಲೆಗಳಾದ ಡೊಳ್ಳು ಕುಣಿತ, ಪಟ ಕುಣಿತ, ಪೂಜಾ ಕುಣಿತದಂತೆ ಕೋಲಾಟ ಕುಣಿತವನ್ನು ಜನರು ಇಷ್ಟ ಪಡುತ್ತಾರೆ. ಕೋಲಾಟ ಪ್ರಾಚೀನವಾದ ಕಲೆಯಾಗಿದೆ. ಗೋಪಿಕಾ ಸ್ತ್ರೀಯರು ಶ್ರೀ ಕೃಷ್ಣನೊಂದಿಗೆ ಬಣ್ಣದ ಕೋಲುಗಳಿಗೆ ಆಟವಾಡಿದುದು ಕೋಲಾಟ ಪ್ರಾಚೀನವಾದ ಕಲೆ ಎಂಬುದನ್ನು ತಿಳಿಸುತ್ತದೆ ಎಂದರು.

ADVERTISEMENT

ಒಬ್ಬನ ಕೋಲಿಗೆ ಮತ್ತೊಬ್ಬನ ಕೋಲನ್ನು ತಾಕಿಸುವ ಮೂಲಕ ಆರಂಭವಾಗುವ ಕೋಲಾಟ ಒಬ್ಬನಿಗೆ ಮತ್ತೊಬ್ಬ ಸುತ್ತು ಹೊಡೆಯುತ್ತಾ ಆಡುವುದು, ಗುಂಪಿನಲ್ಲಿಯೇ ಚದುರಿದಂತೆ ನಿಂತು ಹೊರಗಿನವರು ಒಳಗೂ, ಒಳಗಿನವನು ಹೊರಗೂ ಕೋಲನ್ನು ಕೊಡುವುದು, ಹೀಗೆ ಆಡುತ್ತಾ ಕುಳಿತು ಕೋಲು ಕೊಡುವುದು, ಎರಡು ಗುಂಪು ಎದುರುಬದುರು ನಿಂತು ಕೋಲು ಕೊಡುವುದು, ಇತ್ಯಾದಿಯಾಗಿ ವಿವಿಧ ಗತಿಯಲ್ಲಿ ಕೋಲಾಟವು ನಡೆಯುತ್ತದೆ. ಕೋಲಾಟದಲ್ಲಿ ಹಲವು ವಿಧಗಳಿವೆ ಎಂದರು.

ಊರ ಹಬ್ಬಗಳಲ್ಲಿ, ಉತ್ಸವಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಸಿಗುತ್ತವೆ. ಕೋಲಾಟ ಆಡುವುದರಿಂದ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೋಲಾಟದ ಗೀತೆಗಳು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುತ್ತವೆ ಎಂದು ಅವರು ಹೇಳಿದರು.

ಕೋಲಾಟದ ಕಲಾವಿದರಾದ ಶಿವರಾಜು, ಅಶ್ವತ್ಥ್, ಕುಮಾರ್, ಮಹೇಶ್, ರವೀಶ್, ಭರತ್, ಪ್ರತಾಪ್, ಕಾಳೇಗೌಡ, ಪುಟ್ಟಸ್ವಾಮಿಗೌಡ, ಜಯರಾಮೇಗೌಡ, ಪ್ರದೀಪ್, ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.