ADVERTISEMENT

ಕೆ-ಸೆಟ್ ಪರೀಕ್ಷೆ: ಹಿಂದೂ ವಿದ್ಯಾರ್ಥಿನಿಯರ ಓಲೆ, ಮೂಗುತಿ ತೆಗೆಸಿದಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:21 IST
Last Updated 4 ನವೆಂಬರ್ 2025, 5:21 IST
ನಾಗಾರ್ಜುನಗೌಡ
ನಾಗಾರ್ಜುನಗೌಡ   

ಕನಕಪುರ: ಬಳ್ಳಾರಿಯಲ್ಲಿ ನಡೆದ ಕೆ-ಸೆಟ್ ಪರೀಕ್ಷಾ ಕೇಂದ್ರದಲ್ಲಿ ಹಿಂದೂ ವಿದ್ಯಾರ್ಥಿನಿಯರ ಕಿವಿಯೊಲೆ ಮತ್ತು ಮೂಗುತಿಯನ್ನು ತೆಗೆಸಿದ ಘಟನೆಯನ್ನು ಶ್ರೀರಾಮ ಸೇನೆ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ನಾಗಾರ್ಜುನಗೌಡ ಖಂಡಿಸಿದ್ದಾರೆ.

ಹಿಂದೂ ಧಾರ್ಮಿಕ ಪರಂಪರೆ ಮತ್ತು ನಂಬಿಕೆ ಮೇಲಿನ ಹಲ್ಲೆ ಎಂದು ಆರೋಪಿಸಿದ ಅವರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆ ರಾಜ್ಯದಲ್ಲಿನ ಹಿಂದೂ ವಿರೋಧಿ ಮನೋಭಾವ ಸೂಚಕ ಎಂದು ದೂರಿದರು.

ರಾಜ್ಯದ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಎಂದು ಸಂಸ್ಥೆ ಒತ್ತಾಯಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.