ಕುದೂರು: ದೇವಸ್ಥಾನದ ಮುಂಭಾಗದಲ್ಲಿ ಇಟ್ಟಿದ್ದ ಹುಂಡಿಯ ಬೀಗ ಒಡೆದು ಅದರಲ್ಲಿದ್ದ ಹಣವನ್ನು ಕದ್ದೊಯ್ದಿರುವ ಘಟನೆ ಈಚೆಗೆ ನಡೆದಿದೆ.
ತಿಪ್ಪಸಂದ್ರ ಹೋಬಳಿಯ ಮುಳ್ಳುಕಟ್ಟಮ್ಮನಪಾಳ್ಯ ಗ್ರಾಮದ ಮುಳ್ಳುಕಟ್ಟಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಹುಂಡಿಯಲ್ಲಿದ್ದ ಸುಮಾರು ₹15 ಸಾವಿರ ಹಣ ಕಳ್ಳತನವಾಗಿದೆ ಎಂದು ದೇವಾಲಯದ ಅರ್ಚಕ ಮಹೇಶ್ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವರ ಮೈ ಮೇಲಿದ್ದ ಚಿನ್ನದ ಒಡವೆ, ಬೆಳ್ಳಿ ವಸ್ತುಗಳು ಯಾವವೂ ಕಳ್ಳತನವಾಗಿಲ್ಲ. ಹುಂಡಿಯ ಹಣ ಮಾತ್ರ ಹೋಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.