ADVERTISEMENT

ಕನಕಪುರ: ನಿರ್ಮಾಣ ಹಂತದ ಮನೆಯೊಳಗೆ ನುಗ್ಗಿದ ಚಿರತೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:29 IST
Last Updated 10 ಫೆಬ್ರುವರಿ 2026, 4:29 IST
ಕನಕಪುರ ಗೆಂಡೆಕೆರೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಒಳಗಡೆ ಚಿರತೆ ಕಾಣಿಸಿಕೊಂಡಿರುವುದು
ಕನಕಪುರ ಗೆಂಡೆಕೆರೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಒಳಗಡೆ ಚಿರತೆ ಕಾಣಿಸಿಕೊಂಡಿರುವುದು   

ಕನಕಪುರ: ಗೆಂಡೆಕೆರೆ ಗ್ರಾಮದಲ್ಲಿ ಚಿರತೆಯೊಂದು ನಿರ್ಮಾಣ ಹಂತದಲ್ಲಿರುವ ಮನೆಯೊಳಗೆ ನುಗ್ಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. 

ಶಿವಕುಮಾರ್ ಎಂಬುವರು ತಮ್ಮ ತೋಟದಲ್ಲಿ ಮನೆ ಕಟ್ಟುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 4ಗಂಟೆಗೆ ಚಿರತೆಯೊಂದು ಕಾಂಪೌಂಡ್ ಗೋಡೆಯೇರಿ ನಿರ್ಮಾಣದ ಮನೆಯೊಳಗೆ ಪ್ರವೇಶಿಸಿದೆ. ಸ್ವಲ್ಪ ಸಮಯ ಸಂಚರಿಸಿದ ನಂತರ ಹೊರಗೆ ಹಾರಿ ಹೋಗಿದೆ.

ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. 

ADVERTISEMENT

ಚಿರತೆ ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವಂತೆ ಶಿವಕುಮಾರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಸಿಟಿವಿ ವಿಡಿಯೊ ಕಳುಹಿಸಿ ಮನವಿ ಮಾಡಿದ್ದಾರೆ. ಆರ್.ಎಫ್.ಒ ರವಿ ಮನೆ ಸುತ್ತಲೂ ಬೋನು ಇಡುವುದಾಗಿ ತಿಳಿಸಿದ್ದಾರೆ.

ಕನಕಪುರ: ಚಿರತೆಯೊಂದು ನಿರ್ಮಾಣ ಹಂತದಲ್ಲಿರುವ ಮನೆಯ ಒಳಗಡೆ ಬಂದು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿ ಭಯ ಹುಟ್ಟಿಸಿದೆ.

ಕಸಬಾ ಹೋಬಳಿ ಗೆಂಡೆಕೆರೆ ಗ್ರಾಮದಲ್ಲಿ ಶಿವಕುಮಾರ್ ಎಂಬವರು ಗ್ರಾಮಕ್ಕೆ ಹೊಂದಿಕೊಂಡಂತ ತೋಟದಲ್ಲಿ ನೂತನವಾಗಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದು ಭಾನುವಾರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಚಿರತೆಯು ಕಾಂಪೌಂಡ್ ಗೋಡೆಯನ್ನು ಹತ್ತಿ ನಿರ್ಮಾಣ ಹಂತದ ಮನೆಯ ಒಳಗೆ ಹೋಗಿದೆ.

ಸ್ವಲ್ಪ ಕಾಲ ಮನೆಯ ಒಳಗೆ ಓಡಾಡಿ ನಂತರ ಕಾಂಪೌಂಡ್ ಹಾರಿ ಮನೆಯಿಂದ ಹೊರಬಂದು ಜಮೀನಿನಲ್ಲಿ ಹೊರಟುಹೋಗಿದೆ, ಚಿರತೆ ಬಂದು ಹೋಗಿರುವುದು ಮನೆಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಿವಕುಮಾರ್ ಅವರು ಪ್ರತಿ ದಿನ ಸಿಸಿಟಿವಿ ಕ್ಯಾಮರವನ್ನು ಪರಿಶೀಲಿಸುತ್ತಿದ್ದು ಭಾನುವಾರ ಸಿಸಿಟಿವಿಯನ್ನು ನೋಡುತ್ತಿದ್ದಾಗ ಚಿರತೆ ಬಂದು ಹೋಗಿರುವುದು ಗೊತ್ತಾಗಿದೆ, ಒಂದು ವೇಳೆ ಮನೆಯ ಒಳಗಡೆ ಯಾರಾದರೂ ಕಾವಲು ಕಾಯುತ್ತಿದ್ದರೆ ಚಿರತೆಗೆ ಸಿಲುಕಿ ಕೊಳ್ಳುತ್ತಿದ್ದರು ಎಂದು ಆತಂಕಗೊಂಡು ಭಯಭೀತರಾಗಿದ್ದಾರೆ.

ಗ್ರಾಮದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆಹಿಡಿದು ರಕ್ಷಣೆ ಮಾಡುವಂತೆ ಶಿವಕುಮಾರ್ ಅವರು ಅರಣ್ಯ ಅಧಿಕಾರಿಗಳಿಗೆ ಸಿಸಿಟಿವಿ ಕ್ಯಾಮೆರಾದ ವಿಡಿಯೋವನ್ನು ಕಳಿಸಿ ಚಿರತೆಯನ್ನು ಸೆರೆಹಿಡಿಯುವಂತೆ ಮನವಿ ಮಾಡಿದ್ದಾರೆ.

ಗ್ರಾಮಕ್ಕೆ ಚಿರತೆ ಬಂದಿರುವ ಮಾಹಿತಿಯನ್ನು ತಿಳಿದ ಕನಕಪುರ ಆರ್ ಎಫ್ ಒ ರವಿ ಅವರು ಶಿವಕುಮಾರ್ ಅವರ ಜೊತೆ ಮಾತನಾಡಿ ತಕ್ಷಣವೇ ಚಿರತೆಯನ್ನು ಸೆರೆ ಹಿಡಿಯಲು ಮನೆಯ ಅಕ್ಕಪಕ್ಕದಲ್ಲಿ ಬೋನ್ ಅಳವಡಿಸುವುದಾಗಿ ತಿಳಿಸಿದ್ದಾರೆ.

ಕನಕಪುರ ಗೆಂಡೆಕೆರೆ ಗ್ರಾಮದಲ್ಲಿ ನಿರ್ಮಾಣ ಹಂತದ ಮನೆಯ ಒಳಗಡೆ ಹೋಗಲು ಚಿರತೆಯು ಕಾಂಪೌಂಡ ಹತ್ತಿ ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.