ADVERTISEMENT

ಮಾಗಡಿ | ಅಲಸಂದೆ ಹೊಸ ತಳಿ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 15:36 IST
Last Updated 12 ಆಗಸ್ಟ್ 2023, 15:36 IST
ಮಾಗಡಿ ತಾಲ್ಲೂಕಿನ ಕೆವಿಕೆಯಲ್ಲಿ ನಡೆದ ಅಲಸಂದೆ ಹೊಸತಳಿಯ ಪ್ರಾತ್ಯಕ್ಷಿಕೆಯಲ್ಲಿ ವಿಜ್ಞಾನಿ ಡಾ.ದಿನೇಶ್‌ ರೈತರಿಗೆ ಮಾಹಿತಿ ನೀಡಿದರು. ಕೆವಿಕೆ ಮುಖ್ಯಸ್ಥೆ ಡಾ.ಲತಾ ಆರ್‌.ಕುಲಕರ್ಣಿ, ಡಾ.ಸೌಜನ್ಯಾ ಇದ್ದರು
ಮಾಗಡಿ ತಾಲ್ಲೂಕಿನ ಕೆವಿಕೆಯಲ್ಲಿ ನಡೆದ ಅಲಸಂದೆ ಹೊಸತಳಿಯ ಪ್ರಾತ್ಯಕ್ಷಿಕೆಯಲ್ಲಿ ವಿಜ್ಞಾನಿ ಡಾ.ದಿನೇಶ್‌ ರೈತರಿಗೆ ಮಾಹಿತಿ ನೀಡಿದರು. ಕೆವಿಕೆ ಮುಖ್ಯಸ್ಥೆ ಡಾ.ಲತಾ ಆರ್‌.ಕುಲಕರ್ಣಿ, ಡಾ.ಸೌಜನ್ಯಾ ಇದ್ದರು   

ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಹೊಸ ತಳಿ ಪರಿಚಯ ಕಾರ್ಯಕ್ರಮ ಶನಿವಾರ ನಡೆಯಿತು.

ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ದಿನೇಶ್ ಎಂ.ಎಸ್., ಮಾತಾನಾಡಿ ‘ಜಿಲ್ಲೆಯಲ್ಲಿ ಅಲಸಂದೆ ಪ್ರಮುಖ ದ್ವಿದಳ ಧಾನ್ಯದ ಬೆಳೆಯಾಗಿದ್ದು, ಅಂತರ ಬೆಳೆಯಾಗಿ ಬೆಳೆಯುವುದು ವಾಡಿಕೆ. ಪೂರ್ವ ಮುಂಗಾರಿನಲ್ಲಿ ಏಪ್ರಿಲ್- ಮೇ ಹಾಗೂ ತಡವಾದ ಮುಂಗಾರಿನಲ್ಲಿ ಅಗಸ್ಟ್-ಸೆಪ್ಟಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಲು ಸೂಕ್ತ. ಕೃಷಿ ವಿಜ್ಞಾನ ಕೇಂದ್ರದಿಂದ ಸುಧಾರಿತ ಅಲಸಂದೆ ತಳಿ ಕೆ.ಬಿಸಿ-9ನ್ನು ಹಕ್ಕಿನಾಳು ಗ್ರಾಮದ 20 ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಲಾಗುತ್ತಿದೆ’ ಎಂದರು.

ಕೆವಿಕೆ ಕೇಂದ್ರದ ಮುಖ್ಯಸ್ಥೆ ಡಾ.ಲತಾ.ಆರ್‌.ಕುಲಕರ್ಣಿ ಉಪನ್ಯಾಸ ನೀಡಿದರು. ವಿಜ್ಞಾನಿ ಡಾ.ಸೌಜನ್ಯಾ ದತ್ತು ಗ್ರಾಮದ ವಿಶೇಷ ಕಾರ್ಯಕ್ರಮಗಳ ಕುರಿತು ತಿಳಿಸಿದರು. ಕ್ಷೇತ್ರ ಪರಿವೀಕ್ಷಕ ಹರಿಪ್ರಸಾದ್, ರೈತರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.