ADVERTISEMENT

ಮಾಗಡಿ: ಬಿ.ವೈ.ವಿಜಯೇಂದ್ರಗೆ ‘ಶಿವಗಂಗೋತ್ರಿ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:29 IST
Last Updated 18 ಫೆಬ್ರುವರಿ 2026, 5:29 IST
ಸೋಲೂರು ಹೋಬಳಿ ಪಾಲನಹಳ್ಳಿ ಮಠದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ‘ಶಿವಗಂಗೋತ್ರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಸೋಲೂರು ಹೋಬಳಿ ಪಾಲನಹಳ್ಳಿ ಮಠದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ‘ಶಿವಗಂಗೋತ್ರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮಾಗಡಿ: ಸಮಾಜದ ಏಳಿಗೆಯಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲ್ಲೂಕಿನ ಸೋಲೂರು ಹೋಬಳಿ ಪಾಲನಹಳ್ಳಿ ಮಠದಲ್ಲಿ ಎರಡು ದಿನದ ಶಿವರಾತ್ರಿ ಜಾತ್ರೆಯಲ್ಲಿ ‘ಶಿವಗಂಗೋತ್ರಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಮಠವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ತ್ರಿವಿಧ ದಾಸೋಹ ಕಾರ್ಯವನ್ನು ಪಾಲನಹಳ್ಳಿ ಮಠ ಯಶಸ್ವಿಯಾಗಿ ಮಾಡಿದೆ. ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮುಂದುವರೆಯಲಿದೆ. ಜೆಡಿಎಸ್ ಮತ್ತು ಬಿಜೆಪಿ‌ ಬಾಂಧವ್ಯ ಉತ್ತಮವಾಗಿದೆ ಎಂದು ಹೇಳಿದರು.

ADVERTISEMENT

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಶ್ರದ್ಧೆ, ಶರಣಾಗತಿ, ಆಕಾಂಕ್ಷೆ ರೂಢಿಸಿಕೊಂಡರೆ ಮುಕ್ತಿ ಸಾಧ್ಯ ಎಂದರು.

ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅತಿ ಹೆಚ್ಚು ಭಕ್ತರು ಸೇರುವ ಜಾಗ ಪಾಲನಹಳ್ಳಿ ಮಠದಲ್ಲಿ ಸ್ವಾಮೀಜಿ ಬಹುಮುಖಿ ಸಂತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಗಣ್ಯರ ದಂಡು: ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಅಬಕಾರಿ ಸಚಿವ ಆರ್.ವಿ.ತಿಮ್ಮಾಪುರ, ಶಾಸಕರಾದ ಎನ್.ಶ್ರೀನಿವಾಸ್, ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್, ಗೌರಿಶಂಕರ್, ನೆ.ಲ.ನರೇಂದ್ರ ಬಾಬು, ಹೈಕೋರ್ಟ್ ನ್ಯಾಯಾಮೂರ್ತಿ ದೇವದಾಸ್ ಪಾಲ್ಗೊಂಡಿದ್ದರು.

ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ‘ಮಾತಂಗ ರತ್ನ’ ಪ್ರಶಸ್ತಿಯನ್ನು ವಿಜಯ್ ಪದ್ಮನಾಭ್ ದಂಪತಿಗೆ, ವಿಶ್ವ ಅರುಂಧತಿ ಪ್ರಶಸ್ತಿ, ಸಾಧಕರಿಗೆ ಸನ್ಮಾನ, ಆದಿ ಜಾಂಭವ ಪ್ರಶಸ್ತಿ ವಿತರಿಸಲಾಯಿತು.

ಹರಗುರು ಚರಮೂರ್ತಿ, ಮಾಜಿ ಸಂಸದ ಚಂದ್ರಪ್ಪ, ಪರಿಷತ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣ್, ಮರಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಗದೀಶ್ ಚೌಧರಿ, ಕೆ.ಪಿ.ಭೃಂಗೇಶ್, ಆನಂದ್, ವೆಂಕಟೇಶ್ ದೊಡ್ಡೇರಿ,  ಬೆಸ್ಕಾಂ ಮಾಜಿ ನಿರ್ದೇಶಕರಾದ ಬಿ.ವಿ. ಜಯರಾಂ ಹಾಗೂ ತಮ್ಮಣ್ಣ ಗೌಡ, ಶೈಲಜಾ, ವನಜ, ಕಲ್ಕೆರೆ ಶಿವಣ್ಣ, ದೊಡ್ಡಯ್ಯ, ಗುಡೆಮಾರನಹಳ್ಳಿ ನಾಗರಾಜ್, ಮಾಜಿ ಜಿ.ಪಂ.ಮಾಜಿ ಸದಸ್ಯ ಚೆಲುವರಾಜ್, ಎಲ್.ಎನ್. ಸ್ವಾಮಿ, ದೇವಯ್ಯ, ಬೆಳಗುಂಬ ವಿಶ್ವನಾಥ್, ಗಂಗಲಕ್ಷ್ಮಮ್ಮ ಭಾಗವಹಿಸಿದ್ದರು.

ಪಾಲನಹಳ್ಳಿ ಮಠದ ಶಿವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಂಡ ಜನ
ಭಕ್ತರಿಂದ ಭಕ್ತರಿಗಾಗಿ ಸಮಾಜಮುಖಿ ಕಾರ್ಯಕ್ರಮಗಳು ಮಠದಿಂದ ನಡೆಯುತ್ತಿದ್ದು ಪ್ರತಿವರ್ಷ ಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅನೇಕ ಗಣ್ಯರು ಪಾಲ್ಗೊಂಡಿದ್ದಾರೆ.
ಸಿದ್ದರಾಜು ಸ್ವಾಮೀಜಿ ಪಾಲನಹಳ್ಳಿ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.