ADVERTISEMENT

ಮಾಗಡಿ | ಜಮೀನಿನಲ್ಲಿ ನಿಧಿಶೋಧ ಶಂಕೆ: ದೂರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:42 IST
Last Updated 4 ಜುಲೈ 2025, 15:42 IST
ರಂಗಯ್ಯ ಅವರ ಜಮೀನಿನಲ್ಲಿ ನಿಧಿಗಾಗಿ ಅಗೆದ ಸ್ಥಳ
ರಂಗಯ್ಯ ಅವರ ಜಮೀನಿನಲ್ಲಿ ನಿಧಿಗಾಗಿ ಅಗೆದ ಸ್ಥಳ   

ಮಾಗಡಿ: ತಾಲ್ಲೂಕಿನ ಅಡಕಮಾರನಹಳ್ಳಿ ಜಮೀನಿನೊಂದರಲ್ಲಿ ನಿಧಿಗಾಗಿ ಶೋಧ ನಡೆಸಿರುವ ಬಗ್ಗೆ ಜಮೀನು ಮಾಲೀಕರು ಸಂಶಯ ವ್ಯಕ್ತಪಡಿಸಿ ಮಾಗಡಿ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ.

ತಾಲ್ಲೂಕಿನ ಮಾಡಬಾಳ್ ಹೋಬಳಿ ವ್ಯಾಪ್ತಿಯ ಅಡಕಮಾರನಹಳ್ಳಿ ರಂಗಯ್ಯ ಅವರಿಗೆ ಸೇರಿದ ಜಮೀನನಲ್ಲಿ ಕಳೆದ ಅಮಾವಾಸ್ಯೆ ದಿನದಂದು ಜೆಸಿಬಿಯಿಂದ ಅಗೆದು ಮತ್ತೆ ಸಮತಟ್ಟು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಂಗಯ್ಯ ಅವರ ಪತ್ನಿ ಗಂಗಮ್ಮ, ಜಮೀನನಲ್ಲಿರುವ ವೀರಗಲ್ಲಿನ ಹಿಂಭಾಗದಲ್ಲಿ ಜೆಸಿಬಿ ಗುಂಡಿ ತೆಗೆದು ಮತ್ತೆ ಮುಚ್ಚಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT