ADVERTISEMENT

ಮಾಗಡಿ: ಮಾವಿಗೆ ಬೂದಿ ರೋಗ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 2:55 IST
Last Updated 25 ಜನವರಿ 2026, 2:55 IST
ಮಾವಿನಲ್ಲಿ‌ಕಾಣಿಕೊಂಡ ಬೂದಿ ಶಿಲೀಂಧ್ರ ರೋಗ
ಮಾವಿನಲ್ಲಿ‌ಕಾಣಿಕೊಂಡ ಬೂದಿ ಶಿಲೀಂಧ್ರ ರೋಗ   

ಮಾಗಡಿ: ಮಾವು ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಮುಖ ಬೆಳೆಯಾದ ಮಾವು ಹೂ ಬಿಡುವ ಹಂತದಲ್ಲಿದ್ದು ಬೂದಿ ಶೀಲಿಂಧ್ರ ರೋಗ ಕಾಣಿಸಿಕೊಂಡಿದೆ.

ಸುಮಾರು 32,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಉತ್ತಮ ಹೂ ಬಿಟ್ಟಿದೆ. ಪರಾಗಸ್ಪರ್ಶ ಕ್ರಿಯೆ ಸಕ್ರಿಯವಾಗಿದೆ.

ಕೆಲವೆಡೆ ಪೀಚು ಅಥವಾ ಗೋಲಿ ಗಾತ್ರದ ಹಣ್ಣು ಕಂಡು ಬಂದಿವೆ. ಆದರೆ, ತಣ್ಣನೆಯ ಹವಾಮಾನ ಹಾಗೂ ತಾಪಮಾನದ ಹಠಾತ್‌ ಬದಲಾವಣೆಯಿಂದ ಬೂದಿ ರೋಗ ಕಾಣಿಸಿಕೊಂಡಿದೆ. 

ADVERTISEMENT

ಮೋಡ ಮುಸುಕಿದ ವಾತಾವರಣ, ಚಳಿ ಹೆಚ್ಚಾದರೆ ಬೂದಿ ರೋಗ ಹೆಚ್ಚಾಗುವ ಜೊತೆಗೆ ಹೂವು ಹಾಗೂ ಕಾಯಿ ಉದುರುವ ಆತಂಕ ಎದುರಾಗಿದೆ.

ಸೂಕ್ತ ಶಿಲೀಂಧ್ರ ನಾಶಕ ಬಳಕೆಯಿಂದ ಬೂದಿರೋಗ ತಡೆಗಟ್ಟಬಹುದು. ಮಾಹಿತಿಗೆ ರೈತರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.